ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕಿಲ್ಲರ್ ಕೊರೋನಾ ಹಾವಳಿ ಹೆಚ್ಚುತ್ತಲೇ ಇದೆ. ಮಂಗಳವಾರ ಸಂಜೆಯವರೆಗೆ 29,435 ಇದ್ದ್ ಸೋಂಕಿತರ ಸಂಖ್ಯೆ ಇಂದಿಗೆ 31,332 ಕ್ಕೇರಿದೆ. ಕೇವಲ 24 ಗಂಟೆಯಲ್ಲಿ 1,897 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ನಡುವೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯೂ 7,696 ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ 73 ಮಂದಿ ಸಾವನ್ನಪ್ಪಿದ್ದು ಸಾವನ್ನಪ್ಪಿದವರ ಸಂಖ್ಯೆ 1,007 ಕ್ಕೆ ಏರಿದೆ.
ದೇಶದ ಸೋಂಕಿತರ ಸಂಖ್ಯೆಯ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 728 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಸೊಂಕಿತರ ಸಂಖ್ಯೆ 9,318 ರಷ್ಟು ಹೆಚ್ಚಾಗಿದೆ. ಇಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆಯು ಹೆಚ್ಚಾಗುತ್ತಿದ್ದು, ನಿನ್ನೆಯಿಂದ ಇವತ್ತಿಗೆ 31 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಒಟ್ಟು 400 ಜನ ಬಲಿಯಾಗಿದ್ದಾರೆ. ಗುಜರಾತ್ನಲ್ಲಿ 3,744 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಒಂದೇ ದಿನದಲ್ಲಿ 196 ಜನರಿಗೆ ಸೋಂಕು ಹರಡಿದೆ. ಸಾವನ್ನಪ್ಪಿದವರ ಸಂಖ್ಯೆ 181 ಏರಿಕೆಯಾಗಿದ್ದು, ನಿನ್ನೆ ಸಂಜೆಯಿಂದ ಇವತ್ತಿನವರೆಗೆ 19 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 3 ಸಾವಿರ ಗಡಿ ದಾಟಿದ್ದು, ಕೇವಲ 24 ಗಂಟೆಯಲ್ಲಿ 206 ಮಂದಿಗೆ ಸೋಂಕು ಹರಡಿದೆ. ಇನ್ನು ದೆಹಲಿಯಲ್ಲಿ ಮಹಾಮಾರಿ ಕೊರೋನಾಗೆ 54 ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ 532 ಮಂದಿಗೆ ಸೋಂಕು ತಗುಲಿದ್ದು, ಇಂದು 9 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಸಾವನ್ನಪ್ಪಿದವರ ಸಮಖ್ಯೆ 20 ಕ್ಕೆ ಏರಿದೆ.