Saturday, October 1, 2022
Powertv Logo
Homeರಾಜ್ಯಆ್ಯಪಲ್ ಬೆಲೆಗಿಂತ ಕಾಸ್ಟ್ಲಿಯಾಯ್ತು ಮಾವಿನ ಬೆಲೆ

ಆ್ಯಪಲ್ ಬೆಲೆಗಿಂತ ಕಾಸ್ಟ್ಲಿಯಾಯ್ತು ಮಾವಿನ ಬೆಲೆ

ಬೆಂಗಳೂರು: ಹಣ್ಣುಗಳ ರಾಜ ಮಾವಿಗೆ ಈ ಸಲ ಸೇಬಿನ ದರ ಬಂದಿದೆ. ಈ ಬಾರಿ ಅಕಾಲಿಕ ಮಳೆಯಿಂದಾಗಿ ಅರ್ಧದಷ್ಟು ಬೆಳೆ ಮಾತ್ರ ಬಂದಿದೆ, ಹೀಗಾಗಿ ಸುಮಾರು 8 ಲಕ್ಷ ಟನ್‌ ಮಾವು ಉತ್ಪಾದನೆಯ ನಿರೀಕ್ಷಿಸಲಾಗಿದೆ. ಪ್ರತಿ ವರ್ಷ 14-15 ಲಕ್ಷ ಟನ್‌ ಹಣ್ಣು ಬರುತ್ತಿತ್ತು. ಈ ಬಾರಿ ಅಕಾಲಿಕ ಮಳೆ, ಹವಾಮಾನ ವೈಪರೀತ್ಯದಿಂದಾಗಿ ಸಕಾಲದಲ್ಲಿ ಮಾವು ಹೂವು ಬಿಡದೆ, ಇಳುವರಿ ಕುಂಠಿತಗೊಂಡಿದೆ. ಹೀಗಾಗಿ ಮಾವಿನ ಬೆಲೆ ಸಿಕ್ಕಾಪಟ್ಟೆ ಕಾಸ್ಟಿಯಾಗಿದೆ.

ಈಗಾಗಲೇ ಬಾದಾಮಿ ತಳಿ 200 ರೂ. ಮೇಲ್ಪಟ್ಟು ದರದಲ್ಲಿ ಮಾರಾಟವಾಗುತ್ತಿದೆ. ಅಲ್ಲದೆ, ಅಷ್ಟು ಹಣ ಕೊಟ್ಟರೂ ಇನ್ನೂ ಗುಣಮಟ್ಟದ ಹಣ್ಣು ಸಿಗುತ್ತಿಲ್ಲ. ಪ್ರತಿ ವರ್ಷ ಏಪ್ರಿಲ್‌ ಮಧ್ಯದಲ್ಲಿ ಮಾವು ಮಾರುಕಟ್ಟೆಗೆ ಬರುತ್ತಿತ್ತು. ಆದರೆ, ಈ ಬಾರಿ ಏಪ್ರಿಲ್‌ ಕೊನೆಯಲ್ಲೂ ಬಂದಿಲ್ಲ. ಮೇ ಎರಡನೇ ವಾರದಲ್ಲಿ ಪಕ್ವವಾದ ಮಾವು ಮಾರುಕಟ್ಟೆಗೆ ಬರಲಿದೆ. ಒಂದೆಡೆ ಮಾವು ರೈತರಿಗೆ ಅದೃಷ್ಟದ ಬೆಳೆಯಾದರೆ, ಗ್ರಾಹಕರಿಗೆ ಕೈಸುಡುವ ಹಣ್ಣಾಗಿದೆ.

ಯಾವ್ಯಾವ ಮಾವಿನ ದರ ಎಷ್ಟು (KGಗೆ)

ರಸಪೂರಿ – 150 -200
ಸೇಂಧೂರ – 100 – 150
ಬೈಗಾನಪಲ್ಲಿ- 150 – 200
ರಾಜಗೀರ – 150
ಕಾಲಾಪಹಾಡ್ – 150 – 200
ಬಾದಾಮಿ – 200 – 250
ರತ್ನಗಿರಿ ಅಲ್ಫಾನ್ಸೋ – 350 – 400
ಮಲಗೋಬಾ – 200 – 250
ಇಮಾಮ್‌ಪಸಂದ್ – 250 – 300

ಇನ್ನು ಬೆಲೆ ಏರಿಕೆಯಿಂದಾಗಿ ವ್ಯಾಪಾರವೂ ಅಂದುಕೊಂಡಷ್ಟು ಆಗ್ತಿಲ್ಲ ಅಂತ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಆರಂಭವಾಗೋ ಮಾವಿನ ಹಣ್ಣಿನ ವ್ಯಾಪಾರ ಮೇ ತಿಂಗಳವರೆಗೂ ನಡೆಯುತ್ತೆ. ಮಾರ್ಚ್ ಆರಂಭದಲ್ಲಿ ದರಗಳು ಕೊಂಚ ಹೆಚ್ಚಿದ್ರೂ ಏಪ್ರಿಲ್‌ ಆರಂಭದಲ್ಲಿ ಇಳಿಕೆಯಾಗಬೇಕಿತ್ತು. ಆದ್ರೆ, ಈ ಬಾರಿ ಇಳುವರಿ ಸರಿಯಾದ ಸಮಯಕ್ಕೆ ಬಾರದ ಕಾರಣ ಎಲ್ಲಾ ತಲೆಕೆಳಗಾಗಿದೆ .
ಮಾವಿನ ವ್ಯಾಪಾರವನ್ನೇ ನಂಬಿಕೊಂಡಿದ್ದ ವ್ಯಾಪಾರಿಗಳಿಗಂತೂ 2 ವರ್ಷ ನರಕ ತೋರಿಸಿತ್ತು. ಆದ್ರೆ, ಈ ವರ್ಷ ವ್ಯಾಪಾರ ಚೆನ್ನಾಗಿ ಆಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ .

- Advertisment -

Most Popular

Recent Comments