Home ರಾಜ್ಯ ಇತರೆ ಡಾಕ್ಟರ್ ಸೈನ್​ಗೂ ಕೊಡ್ಬೇಕು ದುಡ್ಡು..!

ಡಾಕ್ಟರ್ ಸೈನ್​ಗೂ ಕೊಡ್ಬೇಕು ದುಡ್ಡು..!

ತುಮಕೂರು: ವೈದ್ಯರು ದೇವರಿಗೆ ಸಮಾನ ಅಂತ ಹೇಳ್ತೀವಿ. ಆದರೆ ಇಲ್ಲೊಬ್ಬರು ಸರ್ಕಾರಿ ವೈದ್ಯರು ತಮ್ಮ ಒಂದು ಸಹಿಗೂ ಇಂತಿಷ್ಟು ಅಂತ ಲಂಚ ತಗೊಳ್ತಾ ಇರೋ ವಿಚಾರ ಬೆಳಕಿಗೆ ಬಂದಿದೆ. ತುಮಕೂರು ಚಿಕ್ಕನಾಯಕನಹಳ್ಳಿಯ ಶೆಟ್ಟಿಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸಹಿಗೂ ಕಾಸು ಕೊಡೋ ಪರಿಸ್ಥಿತಿ ಇದೆ.

ಜನರಿಗೆ ಸುಲಭದಲ್ಲಿ ಆರೋಗ್ಯ ಸೇವೆ ಲಭ್ಯ ಆಗ್ಬೇಕು ಅಂತ ಸರ್ಕಾರಿ ಆಸ್ಪತ್ರೆ ಕಟ್ಸಿದ್ರೆ ಅದೇ ಆಸ್ಪತ್ರೆಯ ಲಂಚಾವತಾರದಿಂದ ಜನ ಬೇಸತ್ತು ಹೋಗಿದ್ದಾರೆ. ದುಡ್ಡಿಲ್ಲದವರಿಗೆ ಸುಲಭವಾಗಿ ಚಿಕಿತ್ಸೆ ಕೊಡಬೇಕಾದ ಸರ್ಕಾರಿ ಆಸ್ಪತ್ರೆಯಲ್ಲಿ ದುಡ್ಡಿದ್ರೆ ಮಾತ್ರ ಚಿಕಿತ್ಸೆ ಅನ್ನೋ ಪರಿಸ್ಥಿತಿ ಇದೆ. ಮೆಡಿಕಲ್​ ಸರ್ಟಿಫಿಕೆಟ್​ಗೆ ಒಂದು​ ಸಹಿ ಬೇಕು ಅಂದ್ರೆ 50 ರೂ. ಕೊಡ್ಬೇಕು. ವೈದ್ಯರ ಲಂಚಾವತಾರಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments