ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರ ಸಾಬೀತಾದರೆ ಕಡ್ಡಾಯ ನಿವೃತ್ತಿ ಗ್ಯಾರಂಟಿ

0
738

ಬೆಂಗಳೂರು:  ಈ ನಡುವೆ ಸರ್ಕಾರಿ ಅಧಿಕಾರಿಗಳು ರೂಲ್ಸ್ ಬ್ರೇಕ್ ಮಾಡುತ್ತಿರುವುದಲ್ಲದೆ ಅಶಿಸ್ತನ್ನು ತೋರುತ್ತಿದ್ದಾರೆ. ಹಾಗಾಗಿ ಇದನ್ನು ತಡೆಯಲು ಸರ್ಕಾರವೂ ಹೊಸ ಯೋಜನೆಯನ್ನು ಹಾಕಿಕೊಂಡಿದ್ದು, ಭ್ರಷ್ಟಾಚಾರವನ್ನು ಮಾಡಿದವರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಈಗಾಗಲೇ ಕರ್ನಾಟಕ  ನಾಗರಿಕ ಸೇವಾ ನಿಯಮಗಳಲ್ಲಿ ತಿದ್ದುಪಡಿ ತಂದಿದ್ದು , ಅದಕ್ಕಾಗಿ ಸರ್ಕಾರ ಕರಡನ್ನು ಸಿದ್ಧಪಡಿಸಿದೆ.

ಮೇ 2ರಂದು ರಾಜ್ಯ ಗೆಜೆಟ್​ನಲ್ಲಿ ಇದರ ಬಗ್ಗೆ ಪ್ರಾಸ್ತಾಪಿಸಿದ್ದು, ಅದರ ವಿರುದ್ಧ ಆಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ ನೀಡಿದ್ದಾರೆ. ಅದರಲ್ಲಿ ಅಧಿಕಾರಿ ಎಸಗಿರುವುದು ಬೆಳಕಿಗೆ ಬಂದ ಬಳಿಕ ಕೆಲಸದಿಂದ ವಜಾಗೊಳಿಸುವುದು ಹಾಗೂ ಕಡ್ಡಾಯ ನಿವೃತ್ತಿ ಅಥವಾ ಕೆಲಸದಿಂದ ಟರ್ಮಿನೇಷನ್ ಮಾಡುವ ಶಿಕ್ಷೆಯನ್ನು ನೀಡಲಾಗುತ್ತದೆ. ಈ ಬಗ್ಗೆ ಕರುಡಿನಲ್ಲಿ ನಮೂದಿಸಲಾಗಿದೆ.

ಯಾವುದೇ ಸರ್ಕಾರಿ ಅಧಿಕಾರಿಯ ಭ್ರಷ್ಟಾಚಾರ ಸಾಬೀತಾದರೂ ನಿವೃತ್ತಿ ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಕರ್ನಾಟಕ ನಾಗರಿಕ ಸೇವಾ 1957 ಇದರಲ್ಲಿ ತಿದ್ದುಪಡಿ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ತಿದ್ದುಪಡಿಯಡಿಯಲ್ಲಿ ನಿವೃತ್ತಿಯ ಶಿಕ್ಷೆಯನ್ನು ನೀಡಿದರೆ, ಅವರಿಗೆ ನಿವೃತ್ತಿ ಸೌಲಭ್ಯಗಳು ಸಿಗಲಿವೆ.  ಮುಂದಿನ ದಿನಗಳಲ್ಲಿ ಅವರು ನಾಗರಿಕ ಸೇವೆಗೆ ಸೇರಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಆದರೆ ಟರ್ಮಿನೇಷನ್, ವಜಾ ಮಾಡಿದರೆ ಯಾವುದೇ ಪಿಂಚಣಿ ಆಗಲಿ ಅಥವಾ ಇನ್ನಿತರ ಯಾವುದೇ ಸೌಲಭ್ಯಗಳು ಇಲ್ಲ. ಅಷ್ಟೇ ಅಲ್ಲದೆ ಮತ್ತೆ ನಾಗರಿಕ ಸೇವೆಗೆ  ಸೇರುವಂತಿಲ್ಲ. ಪರಿಷ್ಕೃತ ಕರುಡಿನಲ್ಲಿ ಯಾವ ತಪ್ಪಿಗೆ ಯಾವ ಶಿಕ್ಷೆ ಅನ್ನೋದನ್ನು ವಿಧಿಸಿದ್ದಾರೆ. ಅವು ಈ ಕೆಳಗಿನಂತಿವೆ…

  • ಕಚೇರಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದರೆ ಹಿಂಬಡ್ತಿ
  • ರಾಜಕೀಯದಲ್ಲಿ ಗುರ್ತಿಸಿಕೊಂಡು, ಚುನಾವಣೆಗೆ ಸ್ಪರ್ಧಿಸಿದರೆ ಕಡ್ಡಾಯ ನಿವೃತ್ತಿ
  • ವರದಕ್ಷಿಣೆ ತೆಗೆದುಕೊಂಡರೆ ಕೆಲಸದಿಂದ ವಜಾ ಮಾಡಲಾಗುತ್ತೆ
  • ಎರಡನೇ ಮದುವೆ ಮಾಡಿಕೊಂಡರೆ ಕಡ್ಡಾಯ ನಿವೃತ್ತಿ
  • ಸಿನಿಮಾ, ನಾಟಕದಲ್ಲಿ ಭಾಗಿಯಾದ್ರೆ ಎರಡು ಬಾರಿ ವಾರ್ಷಿಕ ವೇತನ ಬಡ್ತಿ ತಡೆ
  • ನಾಲ್ಕು ತಿಂಗಳ ಅನಧಿಕೃತ ಗೈರಿಗೆ ಮೂರು ವಾರ್ಷಿಕ ವೇತನ ಬಡ್ತಿ ಕಟ್
  • ಮುಷ್ಕರದಲ್ಲಿ ಭಾಗಿಯಾದ್ರೆ ಕೆಳಗಿನ ಹಂತಕ್ಕೆ ವೇತನ ಇಳಿಕೆ
  • ಸರ್ಕಾರಿ ಹಣ ದುರ್ಬಳಕೆ ಮಾಡಿದ್ರೂ ಕಡ್ಡಾಯ ನಿವೃತ್ತಿ

 

LEAVE A REPLY

Please enter your comment!
Please enter your name here