Thursday, October 6, 2022
Powertv Logo
Homeರಾಜ್ಯಕುಡುಕರಿಗೆ ಗುಡ್​ ನ್ಯೂಸ್​ - ಇನ್ಮೇಲೆ ಡ್ರಿಂಕ್​​​ & ಡ್ರೈವ್​​​​​ ತಪಾಸಣೆ ಇಲ್ಲ..!

ಕುಡುಕರಿಗೆ ಗುಡ್​ ನ್ಯೂಸ್​ – ಇನ್ಮೇಲೆ ಡ್ರಿಂಕ್​​​ & ಡ್ರೈವ್​​​​​ ತಪಾಸಣೆ ಇಲ್ಲ..!

ಬೆಂಗಳೂರು: ಚೀನಾದಲ್ಲಿ ಕೊರೋನಾ ವೈರಸ್​ನಿಂದ ಜನ ತತ್ತರಿಸಿ ಹೋಗಿದ್ದಾರೆ. ಇದೀಗ ರಾಜ್ಯದಲ್ಲಿಯೂ ಕೊರೋನಾ ವೈರಸ್ ಹಬ್ಬುತ್ತಿರುವ ಶಂಕೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಡ್ರಂಕ್ & ಡ್ರೈವ್ ಮಾಡುವವರ ತಪಾಸಣೆಯನ್ನು ತಾತ್ಕಲಿಕ ಸ್ಥಗಿತಗೊಳಿಸುವುದಾಗಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ. ಈ ಮೂಲಕ ಮದ್ಯಪಾನ ಮಾಡಿ ಗಾಡಿ ಓಡಿಸುವವರಿಗೆ ಗುಡ್​ನ್ಯೂಸ್​ ಸಿಕ್ಕಂತಾಗಿದೆ. 

ಮಾರಾಣಾಂತಿಕ ಕೊರೋನಾ ವೈರಸ್ ನಗರದ ಕುಡುಕರಿಗೆ ವರದಾನವಾಗಿದೆ. ಡ್ರಂಕ್ & ಡ್ರೈವ್ ತಪಾಸಣೆ ವೇಳೆ ಪೊಲೀಸರಿಗೂ ಸೋಂಕು ಹರಡುವ ಭೀತಿ ಹಿನ್ನೆಲೆ ಕೆಲವು ದಿನಗಳ ಕಾಲ ಡ್ರಂಕ್ & ಡ್ರೈವ್ ತಪಾಸಣೆ ಮಾಡದಂತೆ ಆದೇಶ ನೀಡಿದ್ದಾರೆ. ಇನ್ನುಮುಂದೆ ಕುಡಿದು ಗಾಡಿ ಓಡಿಸುವವರು ಪೊಲೀಸರ ಭಯ ಇಲ್ಲದೆ ಓಡಾಡಬಹುದು.

ಇನ್ನು ಈ ಬಗ್ಗೆ ರಾಜೀವ್​ ಗಾಂಧಿ ಯೂನಿವರ್ಸಿಟಿಗೆ ವರದಿ ಕೇಳಿ ಪತ್ರ ಬರೆದಿರುವ ಸಂಚಾರಿ ಪೊಲೀಸರು, ಡ್ರಿಂಕ್ & ಡ್ರೈವ್ ತಪಾಸಣೆಯಿಂದ ಕೊರೋನಾ ತಗಲುತ್ತಾ ಅಂತ ಕೇಳಿದ್ದಾರೆ.  ಅಲ್ಲಿಂದ ಉತ್ತರ ಬಂದ ಬಳಿಕ ಪರಿಶೀಲನೆ ನಡೆಸುವ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಸದ್ಯ ನಗರದಲ್ಲಿ ಡ್ರಿಂಕ್​ ಆಂಡ್ ಡ್ರೈವ್ ಪರಿಶೀಲನೆಗೆ ತಾತ್ಕಾಲಿಕ‌ವಾಗಿ ಬ್ರೇಕ್ ತೆಗೆದುಕೊಳ್ಳಲಾಗಿದೆ.

7 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments

BrianMot on