Wednesday, November 30, 2022
Powertv Logo
Homeದೇಶ24 ಗಂಟೆಯಲ್ಲಿ ಮತ್ತೆ 3,320 ಮಂದಿಗೆ ಕೊರೋನಾ ಪಾಸಿಟಿವ್ : 2 ಸಾವಿರದ ಅಂಚಿನಲ್ಲಿದೆ ಸಾವಿನ...

24 ಗಂಟೆಯಲ್ಲಿ ಮತ್ತೆ 3,320 ಮಂದಿಗೆ ಕೊರೋನಾ ಪಾಸಿಟಿವ್ : 2 ಸಾವಿರದ ಅಂಚಿನಲ್ಲಿದೆ ಸಾವಿನ ಸಂಖ್ಯೆ

ನವದೆಹಲಿ: ದೇಶದಲ್ಲಿ ಸೋಂಕಿತರ ಸಂಖ್ಯೆ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗಿದ್ದು, ಕಳೆದ ಕೆಲವು ದಿನಗಳಿಂದ ಪ್ರತಿ 24 ಗಂಟೆಗೂ 3 ಸಾವಿರಕ್ಕಿಂತ ಅಧಿಕ ಜನರಲ್ಲಿ ಸೋಂಕು ಪತ್ತೆಯಾಗುತ್ತಿದೆ. ನಿನ್ನೆಯಿಂದ ಇಂದಿಗೆ 3,320 ಜನರಲ್ಲಿ ಸೋಂಕು ದೃಢಪಟ್ಟಿದೆ. ಈವರೆಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 59,662 ಕ್ಕೇರಿಕೆಯಾಗಿದೆ. ಸಾವನ್ನಪ್ಪಿದವರ ಸಂಖ್ಯೆ 2 ಸಾವಿರದ ಅಂಚಿನಲ್ಲಿದೆ. ಇದರ ನಡುವೆ 17,847 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ದೇಶದ ಸೋಂಕಿತರ ಪಟ್ಟಿಯಲ್ಲಿ ಮಹಾರಾಷ್ಟ್ರವು ಮೊದಲ ಸ್ಥಾನದಲ್ಲಿದ್ದು, ಒಂದೇ ದಿನದಲ್ಲಿ ಸೋಂಕಿತರ ಸಂಖ್ಯೆ 1,089 ರಷ್ಟು ಹೆಚ್ಚಾಗಿದ್ದು, ಸೋಂಕಿತರ ಸಂಖ್ಯೆ 19,063ಕ್ಕೇರಿದೆ. ಇನ್ನು ಈವರೆಗೆ ಒಟ್ಟು 731 ಜನ ಸಾವನ್ನಪ್ಪಿದ್ದಾರೆ. ಈ ಮಧ್ಯೆ 3,470 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಗುಜರಾತ್​ನಲ್ಲಿ 7,402 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಕಳೆದ 24 ಗಂಟೆಯಲ್ಲಿ 390 ಜನ ಸೋಂಕಿಗೆ ತುತ್ತಾಗಿದ್ದಾರೆ. ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆಯು 400 ರ ಗಡಿ ದಾಟಿದೆ. ಇನ್ನು ಇಲ್ಲಿ ಈಗಗಲೇ 1,872 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.

ದೆಹಲಿಯಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, 6 ಸಾವಿರದ ಗಡಿ ದಾಟಿದೆ. ನಿನ್ನೆಯಿಂದ ಇಂದಿಗೆ 338 ಜನರಲ್ಲಿ ಸೋಂಕು ದೃಢಪಟ್ಟಿದೆ. ಆದರೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 68 ಆಗಿದ್ದು, ಮಹಾರಾಷ್ಟ್ರ ಹಾಗೂ ಗುಜರಾತ್​ಗೆ ಹೋಲಿಸಿದರೆ ಸಾವಿನ ಸಮಖ್ಯೆ ಇಲ್ಲಿ ಕಡಿಮೆ ಇದೆ. ದೆಹಲಿಯಲ್ಲಿ ಈವರೆಗೆ 2 ಸಾವಿರದಷ್ಟು ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.

ತಮಿಳುನಾಡಿನಲ್ಲೂ ಕೊರೋನಾ ಸೋಂಕಿತರ ಸಂಖ್ಯೆ 6 ಸಾವಿರದ ಗಡಿ ದಾಟಿದೆ. ಕೇವಲ 24 ಗಂಟೆಯಲ್ಲಿ 600 ಸೋಂಕಿತರು ಪತ್ತೆಯಾಗಿದ್ದಾರೆ. ಇಲ್ಲಿವರೆಗೆ 40 ಜನ ಮೃತಪಟ್ಟಿದ್ದಾರೆ. 1,605 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನು ರಾಜಸ್ಥಾನದಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 101, ಮಧ್ಯಪ್ರದೇಶದಲ್ಲಿ ಮೃತಪಟ್ಟವರ ಸಂಖ್ಯೆ 200 ಕ್ಕೇರಿದೆ.

ಕರ್ನಾಟಕದಲ್ಲಿ ಶುಕ್ರವಾರ ಒಂದೇ ದಿನ 48 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 753 ಕ್ಕೇರಿದೆ. ಇನ್ನು ಈವರೆಗೆ ಸೊಂಕಿನಿಂದ 30 ಮಂದಿ ಮೃತಪಟ್ಟಿದ್ದಾರೆ. ಈ ಮಧ್ಯೆ 376 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. 

RELATED ARTICLES

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments

Micltok on
Micltok on