Thursday, October 6, 2022
Powertv Logo
Homeರಾಜ್ಯಕೊರೋನಾ ಇಫೆಕ್ಟ್​ : ನಾಳೆಯಿಂದ ರಾಜ್ಯದಲ್ಲಿ ಏನಿರುತ್ತೆ ಏನಿರಲ್ಲ?

ಕೊರೋನಾ ಇಫೆಕ್ಟ್​ : ನಾಳೆಯಿಂದ ರಾಜ್ಯದಲ್ಲಿ ಏನಿರುತ್ತೆ ಏನಿರಲ್ಲ?

ಬೆಂಗಳೂರು : ರಾಜ್ಯಾದ್ಯಂತ ಕೊರೋನಾ ವೈರಸ್​ ತೀವ್ರವಾಗಿ ಹರಡುತ್ತಿರುವ ಭೀತಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಒಂದು ವಾರಗಳ ಕಾಲ ಶಾಪಿಂಗ್ ಮಾಲ್​, ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳನ್ನು ಮುಚ್ಚುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಾವ ಇರಲಿದೆ ಯಾವೆಲ್ಲಾ ಸೇವೆಗಳು ಇರಲ್ಲ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ನಾಳೆಯಿಂದ ಅನ್ವಯವಾಗುವಂತೆ ರಾಜ್ಯಾದ್ಯಂತ ಪಬ್​, ಜಾತ್ರೆ, ಸೆಮಿನಾರ್​, ಕ್ರೀಡಾ ಚಟುವಟಿಕೆ, ಅದ್ದೂರಿ ವಿವಾಹ ಕಾರ್ಯಕ್ರಮ ನಿಶ್ಚಿತಾರ್ಥ ಕಾರ್ಯಕ್ರಮ, ಶಾಪಿಂಗ್​ ಮಾಲ್​, ಥಿಯೇಟರ್​ ಮತ್ತು ಶಾಲಾ ಕಾಲೇಜುಗಳನ್ನು ಮುಚ್ಚುವಂತೆ ಆದೇಶ ನೀಡಲಾಗಿದೆ. ಇನ್ನು ಈ ಮೊದಲೇ ನಿಗದಿಯಾದ ಸಭಾ ಕಾರ್ಯಕ್ರಮಗಳಿಗೆ ಅನುಮತಿ ಪಡೆದು ನೂರು ಜನ ಮೀರದಂತೆ ಕಾರ್ಯಕ್ರಮ ನಡೆಸಲು ಸೂಚನೆ ನೀಡಲಾಗಿದೆ.

 ಯಾವೆಲ್ಲಾ ಸೇವೆ ಇರಲಿದೆ?

ಮೆಟ್ರೋ ಸೇವೆ, ಬಸ್​ ಸಂಚಾರ, ರೈಲು, ವಿಮಾನ, ಬ್ಯಾಂಕ್​ ಸೇವೆಗಳು, ದಿನಬಳಕೆಯ ವಸ್ತುಗಳು, ಮೆಡಿಕಲ್​ ಸ್ಟೋರ್​, ಆಸ್ಪತ್ರೆ ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದೆ. ಒಂದು ವಾರಗಳ ಕಾಲ ವಸ್ತುಸ್ಥಿತಿಯ ಪರಿಶೀಲನೆ ಮಾಡಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments