Home ರಾಜ್ಯ ಕೋಟೆ ನಾಡಿನಲ್ಲಿ ಶಿಕ್ಷಕರಲ್ಲಿ ಕೋರೋನಾ ಸೋಂಕಿನ ಆತಂಕ..!

ಕೋಟೆ ನಾಡಿನಲ್ಲಿ ಶಿಕ್ಷಕರಲ್ಲಿ ಕೋರೋನಾ ಸೋಂಕಿನ ಆತಂಕ..!

ಚಿತ್ರದುರ್ಗ:  ಕೋಟೆ ನಾಡಿನಲ್ಲಿ ಮೂವರು ಶಿಕ್ಷಕರು, ಗುಮಾಸ್ತ ಸೇರಿದಂತೆ  ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ಆರು ಜನರಿಗೆ ಸೋಂಕು ತಗುಲಿದ್ದು, ಹೊಸದುರ್ಗದಲ್ಲಿ ಆತಂಕ ಮನೆ ಮಾಡಿದೆ.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಶ್ರೀರಾಂಪುರದ ಮುರಾರ್ಜಿ  ದೇಸಾಯಿ ವಸತಿ ಶಾಲೆಯ  ಗುಮಾಸ್ತ, ಅದೇ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ  ಶಿಕ್ಷಕಿ, ಗರಗ ಅನುದಾನಿತ   ಶಾಲೆಯ ಶಿಕ್ಷಕ ಹಾಗೂ ಅರೇ ಹಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಹಾಗೂ ಬೆಲವೆತ್ತ ಗ್ರಾಮದ ಇಬ್ಬರು ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.

ಶಾಲೆ ಆರಂಭವಾಗುವ ಮುನ್ನ ಕೋವಿಡ್ ಟೆಸ್ಟ್ ನ್ನು ಶಿಕ್ಷಕರು ಹಾಗೂ ಸಿಬ್ಬಂದಿ ಮಾಡಿಸಿದ್ದು, ಇದೀಗ ವರದಿ ಬಂದಿದೆ. ಶಾಲೆಗೆ ಹಾಜರಾಗಿದ್ದ ಇಬ್ಬರು  ವಿದ್ಯಾರ್ಥಿಗಳಿಗೆ ಕೋವಿಡ್ ಲಕ್ಷಣ ಕಂಡು ಬಂದಿದ್ದು, ಒಟ್ಟು ಆರು ಮಂದಿ ಸೋಂಕಿತರು ವಿದ್ಯಾರ್ಥಿಗಳ ಸಂಪರ್ಕಕ್ಕೆ ಬಾರದ ಹಿನ್ನೆಲೆಯಲ್ಲಿ  ಭಾರಿ ಅನಾಹುತ ತಪ್ಪಿದೆ. ಹಾಜರಾತಿ ಕಡ್ಡಾಯ ಎಂಬ ಕಾರಣಕ್ಕೆ ಶಿಕ್ಷಕರು ಶಾಲೆಗೆ ಅಗಮಿಸಿದ್ದು, ಈಗ ಶಿಕ್ಷಕರನ್ನು ಕ್ವಾರಂಟೈನ್ ಮಾಡಲಾಗಿದೆ. ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಕೋವಿಡ್ ತಪಾಸಣೆಗೆ  ಕ್ರಮ ವಹಿಸಲಾಗಿದೆ ಎಂದು ಡಿಡಿಪಿಐ  ರವಿಶಂಕರ್ ರೆಡ್ಡಿ ಪವರ್ ಟಿವಿಗೆ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಕರೋನಾ ಲಸಿಕೆ ಬಂದಿರುವುದು ಸಂತೋಷ : ಯು.ಟಿ.ಖಾದರ್

ಬೆಂಗಳೂರು: ಕೊರೋನಾ ಲಸಿಕೆ ವಿತರಣಾ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಖಾರವಾಗಿ ಟ್ವೀಟ್ ಮಾಡಿದ್ದಾರೆ. ಕೊರೊನಾ ಲಸಿಕೆ ಬಂದಿರುವುದು ಸಂತೋಷ. ಆದರೆ ಮೊದಲು ಗ್ರೂಪ್ ಡಿ ನೌಕರರ ಮೇಲೆ ಯಾಕೆ ಪ್ರಯೋಗ ಮಾಡಬೇಕು....

‘ರಾಜ್ಯದಲ್ಲಿ ಕೊರೋನಾ ಲಸಿಕೆ ವಿತರಣೆ’

ಕಲಬುರಗಿ: ಕಲಬುರಗಿಯಲ್ಲಿ ನಗರದ ಜಿಮ್ಸ್ ಕಾಲೇಜಿನಲ್ಲಿ ಸಂಸದ ಉಮೇಶ್ ಜಾಧವ್ ಕೊವಿಡ್ ವ್ಯಾಕ್ಸಿನ್ ಗೆ ಚಾಲನೆ ನೀಡಿದರು. ಜಿಲ್ಲೆಯ 8 ಆರೋಗ್ಯ ಕೇಂದ್ರಗಳಲ್ಲಿ ವ್ಯಾಕ್ಸಿನ್ ಗೆ ಚಾಲನೆ ನೀಡಲಾಯಿತು. ಒಂದು ಕೇಂದ್ರದಲ್ಲಿ 100...

‘ಡಿ ಗ್ರೂಪ್‌ ನೌಕರ ಚಂದ್ರಶೇಖರ್‌ಗೆ ಮೊದಲ ಲಸಿಕೆ ವಿತರಣೆ’

ಬೆಂಗಳೂರು: ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಲಸಿಕಾ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಅಟೆಂಡರ್ ನಾಗರತ್ನಾಗೆ ಲಸಿಕೆ ನೀಡಿ  ಹೂ ಗುಚ್ಛ ನೀಡಿ ಅಭಿನಂದಿಸಿದರು. ಜೊತೆ ಆರೋಗ್ಯ...

‘ಲಸಿಕೆ ವಿತರಣೆಗೆ ಚಾಲನೆ ಕೊಟ್ಟ ಪ್ರಧಾನಿ ಮೋದಿ’

ಬೆಂಗಳೂರು: ಜಗತ್ತಿನ ಅತಿ ದೊಡ್ಡ ಕೊವಿಡ್ ಲಸಿಕೆಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಿದರು. ಅತಿ ಕಡಿಮೆ ದಿನದಲ್ಲಿ ಮಹಾಮಾರಿ ಕೊರೋನಾ ಗೆ ವಿಜ್ಞಾನಿಗಳು ಎರಡು ಲಸಿಕೆಯನ್ನು ಸಿದ್ಧ ಪಡಿಸಿದ್ದಾರೆ....

Recent Comments