ಬೆಂಗಳೂರು : ಪ್ರಾಣದ ಹಂಗು ತೊರೆದು ಕೆಲಸ ಮಾಡ್ತಿರೋರ ಜೀವಕ್ಕೆ ಬೆಲೆಯೇ ಇಲ್ವಾ? ಜೀವವನ್ನು ಒತ್ತೆಯಾಗಿಟ್ಟು ಕೆಲಸ ಮಾಡೋರಿಗೇ ಚಿಕಿತ್ಸೆ ಸಿಗ್ತಿಲ್ಲ! ಇದು ದೂರದ ಯಾವ್ದೋ ರಾಜ್ಯ, ದೇಶದ ಸ್ಥಿತಿಯಲ್ಲ. ನಮ್ಮ ರಾಜಧಾನಿ ಬೆಂಗಳೂರಿನ ಕಥೆಯೇ?
ಹೌದು ಪ್ರಾಣದ ಹಂಗು ತೊರೆದು ಕೆಲಸ ಮಾಡ್ತಿದ್ದ ಕೊರೋನಾ ವಾರಿಯರ್ ಚಿಕಿತ್ಸೆ ಸಿಗದೆ ಪ್ರಾಣಬಿಟ್ಟಿದ್ದಾರೆ. ಬೆಂಗಳೂರಿನ ಪುಲಿಕೇಶಿ ನಗರದ ವಾರ್ಡ್ ನಂಬರ್ 61ರ ಪೌರಕಾರ್ಮಿಕ ರಘು ವೇಲು ಪಿ ಮೃತ ದುರ್ದೈವಿ.
ಶನಿವಾರ ಸಂಜೆ ರಘು ವೇಲು ಅವರಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ರಾತ್ರಿ 9 ಗಂಟೆಯವರೆಗೂ ಎಲ್ಲಿಯೂ ವೆಂಟಿಲೇಟರ್ ಬೆಡ್ ಸಿಕ್ಕಿರಲಿಲ್ಲ. ನಗರದ ಬಹುತೇಕ ಎಲ್ಲಾ ಖಾಸಗಿ ಆಸ್ಪತ್ರೆಗೆ ಅಲೆದರೂ ವೆಂಟಿಲೇಟರ್ ಸೌಲಭ್ಯ ಸಿಗಲಿಲ್ಲ. ಕೊನೆಯದಾಗಿ ದೇವನಹಳ್ಳಿ ಆಕಾಶ್ ಆಸ್ಪತ್ರೆಗೆ ಸಾಗಿಸುವಾಗ ಅವರು ಕೊನೆಯುಸಿರೆಳೆದಿದ್ದಾರೆ.