ನವದೆಹಲಿ: ಇಡೀ ವಿಶ್ವಕ್ಕೆ ಕಂಟಕವಾಗಿ ಪರಣಮಿಸಿರುವ ಕೊರೋನಾ ವೈರಸ್ ಒಟ್ಟು 1,75,536 ಜನರಲ್ಲಿ ಕಂಡುಬಂದಿದ್ದು, 7,007 ಮಂದಿ ಬಲಿಯಾಗಿದ್ದಾರೆ.
ಭಾರತಕ್ಕೆ ಲಗ್ಗೆ ಇಟ್ಟಿರೋ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈಗಾಗಲೇ ದೇಶದಲ್ಲಿ ಮೂರನೇ ಬಲಿಯನ್ನು ಪಡೆದುಕೊಂಡಿದೆ. ಇನ್ನು ದೇಶದಲ್ಲಿ ಸೋಂಕು ತಗುಲಿರುವವರ ಸಂಖ್ಯೆ 125ಕ್ಕೆ ಏರಿದ್ದು, 3 , ಮಂದಿ ಮೃತಪಟ್ಟಿದ್ದಾರೆ. ದೇಶಾದ್ಯಂತ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲಾಗಿದೆ.
ಭಾರತದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಕೇರಳ, ದೆಹಲಿ ಹಾಗೂ ತೆಲಂಗಾಣ ಸೇರಿದಂತೆ ಹಲವು ಕಡೆಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಕರ್ನಾಟಕದಲ್ಲಿ 10 ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.
ಇಟಲಿಯಲ್ಲಿ ಸೋಮವಾರ ಒಂದೇ ದಿನದಲ್ಲಿ 349 ಜನರು ಮೃತಪಟ್ಟಿದ್ದು, 3,233 ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟಾರೆಯಾಗಿ ಅಲ್ಲಿ 28,000 ಜನರಿಗೆ ಸೋಂಕು ತಗುಲಿದೆ. ಚೀನಾದ ರೀತಿಯಲ್ಲೇ ಇಟಲಿಯಲ್ಲಿ ನಿರಂತರವಾಗಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಇರಾನ್ನಲ್ಲಿ ಸೋಮವಾರ ಒಂದೇ ದಿನದಲ್ಲಿ ಮೃತಪಟ್ಟವರ ಸಂಖ್ಯೆ 129ಕ್ಕೆ ಜಿಗಿದಿದೆ. ಚೀನಾದಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದ್ದು, 3,233 ಜನರು ಸಾವನ್ನಪ್ಪಿದ್ದರು.