Tuesday, January 25, 2022
Powertv Logo
Homeಈ ಕ್ಷಣಶಾಲಾ ವಿದ್ಯಾರ್ಥಿಗಳಲ್ಲಿ ಕೊರೋನಾ ಅಬ್ಬರ

ಶಾಲಾ ವಿದ್ಯಾರ್ಥಿಗಳಲ್ಲಿ ಕೊರೋನಾ ಅಬ್ಬರ

ರಾಜ್ಯ : ವಿಜಯನಗರದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಕೊರೋನಾ ಬೆಂಬಿಡದೇ ಕಾಡುತ್ತಿದ್ದು, ಒಂದೇ ದಿನ 14 ವಿದ್ಯಾರ್ಥಿನಿಯರಿಗೆ ಪಾಸಿಟಿವ್ ದೃಢಪಟ್ಟಿದೆ. ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಬಳಿ ಇರೋ ಕಸ್ತೂರ ಬಾ ಗಾಂಧಿ ವಸತಿ ಶಾಲೆಯಲ್ಲಿ 64 ವಿದ್ಯಾರ್ಥಿನಿಯರು ಹಾಗೂ 13 ಜನ ಸಿಬ್ಬಂದಿ ಸೇರಿದಂತೆ 77 ಜನರಿಗೆ ಕೊರೋನಾ ರ್ಯಾಂಡಮ್ ಟೆಸ್ಟ್ ಮಾಡಲಾಗಿತ್ತು.

ಅದ್ರಲ್ಲಿ 14 ವಿದ್ಯಾರ್ಥಿನಿಯರಿಗೆ ಕೊರೋನಾ ಪಾಸಿಟಿವ್ ಬಂದ ಕಾರಣ, ಸದ್ಯ ಕಮಲಾಪುರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಾಗೇಶ್ ನೇತೃತ್ವದಲ್ಲಿ ಶಾಲೆಯನ್ನ ಸೀಲ್ ಡೌನ್ ಮಾಡಲಾಗಿದೆ. ಈ ಬಗ್ಗೆ ಹೊಸಪೇಟೆ THO ಡಾ. ಭಾಸ್ಕರ್ ಮಾಹಿತಿ ನೀಡಿದ್ದಾರೆ.

ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕೊರೋನಾ ಬ್ಲಾಸ್ಟ್​​ ಆಗಿದೆ. ಇಲ್ಲಿ ಸುಮಾರು 250 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರಲ್ಲಿ ಗುರುವಾರ 100 ವಿದ್ಯಾರ್ಥಿಗಳಿಗೆ ಕೊರೋನಾ ಟೆಸ್ಟ್ ಮಾಡಲಾಗಿತ್ತು.
ಈ ಪೈಕಿ 18 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ಧೃಡಪಟ್ಟಿದೆ. ಅಲ್ಲದೇ, ಇಬ್ಬರು ಶಿಕ್ಷಕರಿಗೂ ಕೊರೋನಾ ಕಾಣಿಸಿಕೊಂಡಿದೆ. ಇನ್ನೂ 140 ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಬಾಕಿಯಿದೆ. ಇನ್ನು ಮಕ್ಕಳ ಪೋಷಕರಲ್ಲಿ ಕೊರೋನಾ ಆತಂಕ ಸೃಷ್ಟಿಸಿದೆ. ಸೋಮವಾರದಿಂದ ಶಾಲೆಗೆ ಬೀಗ ಹಾಕೋ ಸಾಧ್ಯತೆಯಿದೆ.

- Advertisment -

Most Popular

Recent Comments