Sunday, May 29, 2022
Powertv Logo
Homeದೇಶಭಾರತದಲ್ಲಿ ಡೆಡ್ಲಿ ಕೊರೋನಾ ವೈರಸ್ : ಸೋಂಕಿತರ ಸಂಖ್ಯೆ 62ಕ್ಕೆ ಏರಿಕೆ!

ಭಾರತದಲ್ಲಿ ಡೆಡ್ಲಿ ಕೊರೋನಾ ವೈರಸ್ : ಸೋಂಕಿತರ ಸಂಖ್ಯೆ 62ಕ್ಕೆ ಏರಿಕೆ!

ನವದೆಹಲಿ: ದೇಶಾದ್ಯಂತ ಮಹಾಮಾರಿ ಕೊರೋನಾ ವೈರಸ್ ತೀವ್ರವಾಗಿ ಹರಡುತ್ತಿದೆ. ಒಬ್ಬರಾದ ಮೇಲೆ ಒಬ್ಬರಂತೆ ಕೊರೋನಾ ವೈರಸ್​ನ ತೀವ್ರತೆಗೆ ಬಲಿಯಾಗುತ್ತಿದ್ದಾರೆ. ಕೇವಲ 24 ಗಂಟೆಯಲ್ಲಿ ದೇಶದಲ್ಲಿ 18 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 62 ಪ್ರಕರಣಗಳು ಕಂಡುಬಂದಿವೆ.

ಬೆಂಗಳೂರಿನಲ್ಲಿ ಈವರೆಗೆ ಒಟ್ಟು 4 ಪ್ರಕರಣಗಳು ಪತ್ತೆಯಾಗಿದ್ದು, ಅಮೇರಿಕಾದಿಂದ ಬಂದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿತ್ತು. ಆದರೆ ನಂತರದಲ್ಲಿ ಅದು ಅವರ ಕುಟುಂಬಕ್ಕೂ ಹರಡಿದೆ. ಹಾಗಾಗಿ ರಾಜದಲ್ಲಿ ಕೋರೋನಾ ವೈರಸ್ ಪತ್ತೆಯಾಗಿರುವವರ ಸಂಖ್ಯೆ ಒಂದರಿಂದ ನಾಲ್ಕಕ್ಕೆ ಏರಿಕೆಯಾಗಿದೆ.

ಕೇರಳದಲ್ಲಿ ಹೊಸದಾಗಿ 8 ಮಂದಿ ಸೋಂಕಿತರು ಪತ್ತೆಯಾಗಿದ್ದು, ಒಟ್ಟು 14 ಕೊರೋನಾ ವೈರಸ್​ನಿಂದ ಬಳಲುತ್ತಿದ್ದಾರೆ. 1495 ಜನರನ್ನು ಅಬ್ಸರ್​ವೇಷನ್​ನಲ್ಲಿ ಇಡಲಾಗಿದೆ. ಇದೀಗ ಕೇರಳದಲ್ಲಿ ಹೈ ಅಲರ್ಟ್ ಘೋಷಣೆಯಾಗಿದ್ದು, ರಾಜ್ಯದಲ್ಲಿ ಥಿಯೇಟರ್ ಹಾಗೂ ಹೆಚ್ಚು ಜನ ಸೇರುವ ಸ್ಥಳಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ.

ಮಹಾರಾಷ್ಟ್ರದಲ್ಲಿಯೂ ಕೊರೋನಾ ವೈರಸ್ ಪತ್ತೆಯಾಗಿದ್ದು, ದುಬೈನಿಂದ ಬಂದಿದ್ದ ದಂಪತಿಯಿಂದ  ಮಹಾರಾಷ್ಟ್ರಕ್ಕೆ ಕೊರೋನಾ ಕಾಲಿಟ್ಟಿದೆ. ದುಬೈ ಪ್ರವಾಸಕ್ಕೆ ತೆರಳಿದ್ದ 40 ಜನರಲ್ಲಿ ಓರ್ವ ವ್ಯಕ್ತಿಗೆ ಸೋಂಕು ಇರುವುದು ಪತ್ತೆಯಾಗಿದೆ. ಇನ್ನು ಈ ಕುಟುಂಬವನ್ನು ಏರ್​ಪೋರ್ಟ್​ನಿಂದ ಮನೆಗೆ ಡ್ರಾಪ್ ಮಾಡಿದ ಕ್ಯಾಬ್ ಡ್ರೈವರ್​ಗೂ ವೈರಸ್ ತಗಲಿದ್ದು, ಒಟ್ಟು 5 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ ಜಮ್ಮು- ಕಾಶ್ಮೀರದಲ್ಲಿಯೂ ಸೋಂಕು ಪತ್ತೆಯಾಗಿದೆ.  

LEAVE A REPLY

Please enter your comment!
Please enter your name here

- Advertisment -

Most Popular

Recent Comments