ದೇಶಾದ್ಯಂತ ಸೋಂಕಿತರ ಸಂಖ್ಯೆ 39 ಸಾವಿರಕ್ಕೆ ಏರಿಕೆ : ಕಳೆದ 24 ಗಂಟೆಯಲ್ಲಿ 2,644 ಜನರಲ್ಲಿ ಸೋಂಕು ದೃಢ

0
353

ನವದೆಹಲಿ: ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೇವಲ 24 ಗಂಟೆಯಲ್ಲಿ  2,644 ಜನರಲ್ಲಿ ಸೋಂಕು ಪತ್ತೆಯಾಗಿದೆ.ಈ ಮೂಲಕ ಸೋಂಕಿತರ ಸಂಖ್ಯೆ 39,980 ಕ್ಕೆ  ಏರಿಕೆಯಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಿನ್ನೆಯಿಂದ ಇಂದಿಗೆ  ಒಟ್ಟು 83 ಜನ ಸೋಂಕಿತರು ಸಾವನ್ನಪ್ಪಿದ್ದು, ಈವರೆಗೆ 1,301 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ. ದೇಶದಲ್ಲಿ ಸೋಂಕಿತರು ಹಾಗೂ ಸೊಂಕಿನಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿರುವುದರ ನಡುವೆ 10,633 ಜನ ಸೋಂಕಿತರು ಗುಣಮುಖರಾಗಿದ್ದಾರೆ.

ಮಹಾರಾಷ್ಟ್ರದಲ್ಲಿ  ಕಳೆದ 24 ಗಂಟೆಯಲ್ಲಿ ಹೊಸದಾಗಿ 790 ಜನರಿಗೆ ಸೋಂಕು ತಗುಲಿದ್ದು, ಈವರೆಗೆ ಒಟ್ಟು 12,296 ಜನರಲ್ಲಿ ಸೋಂಕು ದೃಢಪಟ್ಟಿದೆ. ಇಲ್ಲಿ ಸಾವನ್ನಪ್ಪಿದವರ ಸಂಖ್ಯೆ 500 ರ ಗಡಿ ದಾಟಿದ್ದು, ಒಂದೇ ದಿನ 36 ಮಂದಿ ಸಾವನ್ನಪ್ಪಿದ್ದಾರೆ. ಗುಜರಾತ್​ನಲ್ಲಿ ಸೋಂಕಿತರ ಸಂಖ್ಯೆ  5,054 ಕ್ಕೆ ಏರಿಕೆಯಾಗಿದ್ದು, ಒಂದೇ ದಿನದಲ್ಲಿ 333 ಜನರಲ್ಲಿ ಸೋಂಕು ಪತ್ತೆಯಾಗಿದೆ. 26 ಜನ ಸಾವನ್ನಪ್ಪಿದ್ದು,  ಈವರೆಗೆ ಒಟ್ಟು 262 ಜನ  ಮೃತಪಟ್ಟಿದ್ದಾರೆ. ಇನ್ನು ದೆಹಲಿಗೆ ಬಂದರೆ ಸೋಂಕಿತರ ಸಂಖ್ಯೆ ಕೇವಲ 24 ಗಂಟೆಯಲ್ಲಿ 384 ರಷ್ಟು ಏರಿಕೆ ಕಂಡಿದ್ದು, ಈವರೆಗೆ ಒಟ್ಟು 4,122 ಜನರಲ್ಲಿ ಸೋಂಕು ದೃಢಪಟ್ಟಿದೆ. ದೆಹಲಿಯಲ್ಲಿ 3 ಜನ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 64 ಕ್ಕೆ ಏರಿಕೆಯಾಗಿದೆ. ಹಾಗಾಗಿ ದೇಶದ ಸೋಂಕಿತರ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಗುಜರಾತ್ ಎರಡನೇ ಹಾಗೂ ದೆಹಲಿ ಮೂರನೇ ಸ್ಥಾನದಲ್ಲಿದೆ.

ಇನ್ನು ಕರ್ನಾಟಕ ಶನಿವಾರ ಒಂದೇ ದಿನದಲ್ಲಿ 12 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ  600 ರ ಗಡಿ ದಾಟಿದೆ. ಇನ್ನು ರಾಜ್ಯದಲ್ಲಿ ಶನಿವಾರ ಮೂವರು ಸಾವನ್ನಪ್ಪಿದ್ದು, ಒಟ್ಟು  25 ಜನ ಮೃತಪಟ್ಟಿದ್ದಾರೆ. ಇದರ ನಡುವೆ ಈವರೆಗೆ ಒಟ್ಟು 271 ಜನ ಸೋಂಕಿತರು ಗುಣಮುಖರಾಗಿದ್ದಾರೆ.

LEAVE A REPLY

Please enter your comment!
Please enter your name here