Thursday, October 6, 2022
Powertv Logo
Homeದೇಶವಿಶ್ವದಾದ್ಯಂತ ಅಟ್ಟಹಾಸ ಮೆರೆಯುತ್ತಿದೆ ಕೊರೋನಾ :  ಸೋಂಕಿತರ ಸಂಖ್ಯೆ 24,82,044 ಕ್ಕೆ ಏರಿಕೆ

ವಿಶ್ವದಾದ್ಯಂತ ಅಟ್ಟಹಾಸ ಮೆರೆಯುತ್ತಿದೆ ಕೊರೋನಾ :  ಸೋಂಕಿತರ ಸಂಖ್ಯೆ 24,82,044 ಕ್ಕೆ ಏರಿಕೆ

ನವದೆಹಲಿ: ವಿಶ್ವದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ. ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ  24,82,044 ಕ್ಕೆ ಏರಿಕೆಯಾಗಿದೆ. 1,70,456 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಭಾರತದಲ್ಲೂ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ದೇಶದಲ್ಲಿ ಈವರೆಗೆ ಒಟ್ಟು 18,601 ಜನರಲ್ಲಿ ದೃಢಪಟ್ಟಿದೆ. ಕೇವಲ 24 ಗಂಟೆಯಲ್ಲಿ 1,336 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಒಂದು ದಿನದಲ್ಲಿ 47 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ದೇಶದಲ್ಲಿ ಒಟ್ಟು ಸೋಂಕಿಗೆ ಬಲಿಯಾದವರ ಸಂಖ್ಯೆ  590ಕ್ಕೆ ಏರಿಕೆಯಾಗಿದೆ. ಆದರೆ ಇವೆಲ್ಲದರ ನಡುವೆ ಸಮಾಧಾನಕರ ವಿಷಯವೆಂದರೆ  18,601 ಮಂದಿ ಸೋಂಕಿತರಲ್ಲಿ 3,252 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ವಿಶ್ವದ ಕೋವಿಡ್-19  ಸೋಂಕಿತರ ಪಟ್ಟಿಯಲ್ಲಿ ಅಮೆರಿಕಾ ಮೊದಲ ಸ್ಥಾನದಲ್ಲಿದ್ದು, 7, 92,913 ಮಂದಿ ಯಲ್ಲಿ ಸೋಂಕು ದೃಡಪಟ್ಟಿದ್ದು, ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ  42, 517 ಕ್ಕೆ ಏರಿದೆ. ಇನ್ನು ಸ್ಪೇನ್ ಎರಡನೇ ಸ್ಥಾನದಲ್ಲಿದ್ದು, 2,00,210 ಮಂದಿಯಲ್ಲಿ ಸೋಂಕು ತಗುಲಿದೆ. ಸಾವನ್ನಪ್ಪಿದವರ ಸಂಖ್ಯೆಯೂ 20,852ಕ್ಕೆ ಏರಿದೆ. ಇನ್ನುಳಿದಂತೆ ಇತರ ಕೆಲವು ದೇಶಗಳಲ್ಲಿನ ಸೋಂಕಿತರು ಹಾಗೂ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಈ ಕೆಳಗಿನಂತಿದೆ..

ಇಟಲಿ                     1,81,228              24,114

ಫ್ರಾನ್ಸ್                    1,55,383              20,265

ಜರ್ಮನಿ                 1,47,065              4,862

ಯುಕೆ                    1,24,743              16,509

ಟರ್ಕಿ                     90,980                 2,140

ಇರಾನ್                   83,505                5,209

ಚೀನಾ                    82,758                4,632

ರಷ್ಯಾ                     47,121                405

ಬ್ರೆಜಿಲ್                   40,743                2,587

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments