ದಾವಣಗೆರೆ: ಸಾಂಕ್ರಾಮಿಕ ರೋಗಗಳ ನಿಯಂತ್ರಣ ಹೊಣೆ ಹೊತ್ತಿರುವ ದಾವಣಗೆರೆಗೆ ಸರ್ವೇಕ್ಷಣಾ ಇಲಾಖೆಗೆ ಕೊರೋನಾ ಕಂಟಕ ಎದುರಾಗಿದೆ.
ಜಿಲ್ಲಾ ಸರ್ವೇಕ್ಷಣಾಧಿಕಾರಿ ರಾಘವನ್ ಅವರಿಗೆ ಕೊರೋನಾ ಸೋಂಕು ದೃಢವಾಗಿದ್ದು, ಮನೆಯಲ್ಲಿಯೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ವೇಕ್ಷಣಾ ಇಲಾಖೆಗೆ ಕೊರೋನಾ ಕಂಟಕವಾಗಿ ಪರಿಣಮಿಸಿದೆ, ಈ ಹಿಂದೆ ಸರ್ವೇಕ್ಷಣಾ ಇಲಾಖೆಯ ಏಳು ಮಂದಿಗೆ ಕೊರೋನಾ ಕಾಣಿಸಿಕೊಂಡಿತ್ತು. ಇನ್ನೂ ನಾಲ್ಕೈದು ತಿಂಗಳಿನಿಂದ ಕೊರೋನಾ ನಿಯಂತ್ರಣಕ್ಕೆ ಸಾಕಷ್ಟು ಶ್ರಮ ವಹಿಸಿದ್ದ ರಾಘವನ್ ಅವರಿಗೆ ಕೊರೋನಾ ಸೋಂಕು ತಗುಲಿದ್ದು, ರಾಘವನ್ ಅವರು ಆದಷ್ಟೂ ಬೇಗ ಗುಣಮುಖರಾಗಿ ಬರಲಿ ಎಂದು ಅಧಿಕಾರಿ ವರ್ಗ ಪ್ರಾರ್ಥಿಸಿದೆ.