ಹಾಸನ,ಯಾದಗಿರಿ: ಗ್ರೀನ್ ಝೋನ್ ವ್ಯಾಪ್ತಿಯಲ್ಲಿರುವ ಜಿಲ್ಲೆಗಳಿಗೂ ಹೆಮ್ಮಾರಿ ಕೊರೋನಾ ಕಾಲಿಟ್ಟಿದ್ದು, ಹಾಸನದಲ್ಲಿ ಐವರು ಹಾಗೂ ಯಾದಗಿರಿಯಲ್ಲಿ ಇಬ್ಬರಲ್ಲಿ ಸೋಂಕು ಪತ್ತೆರಯಾಗಿದೆ.
ಇಂದು ಹಾಸನದಲ್ಲಿ ಪತ್ತೆಯಾದ ಕೊರೋನಾ ಸೋಂಕಿತರೆಲ್ಲರಿಗೂ ಸೋಂಕು ಬಂದಿರುವ ಮೂಲ ಒಂದೇ ಆಗಿದ್ದು, ಅವರೆಲ್ಲರೂ ಮುಂಬೈ ಪ್ರಯಾಣ ಬೆಳೆಸಿ ಬಂದವರಾಗಿದ್ದಾರೆ. ಅವರಲ್ಲಿ ಒಂದು 7 ವರ್ಷ ಹಾಗೂ 4 ವರ್ಷದ ಹೆಣ್ಣು ಮಗುವಿಗೆ ಸೋಂಕು ತಗುಲಿದೆ. ಇನ್ನುಳಿದಂತೆ 36 ವರ್ಷದ ಪುರುಷ, 27 ವರ್ಷದ ಮಹಿಳೆ, 45 ವರ್ಷದ ಪುರಷನಿಗೆ ಸೋಂಕು ದೃಢಪಟ್ಟಿದೆ.
ಇನ್ನು ಯಾದಗಿರಿಯಲ್ಲಿ ಇಬ್ಬರಲ್ಲಿ ಸೋಂಕು ಕಂಡುಬಂದಿದೆ. 33 ವರ್ಷದ ಮಹಿಳೆ ಹಾಗೂ 38 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದ್ದು, ಅಹಮದಾಬಾದ್ಗೆ ಪ್ರಯಾಣ ಬೆಳೆಸಿದ ಹಿನ್ನೆಲೆ ಸೋಂಕಿಗೆ ತುತ್ತಗಿದ್ದಾರೆ.