ಬೆಂಗಳೂರು: ಒಂದೇ ಕುಟುಂಬದ ಮೂವರಿಗೆ ಬ್ರಿಟನ್ ವೈರಸ್ ಆಟ್ಯಾಕ್ ಆಗಿರುವ ಹಿನ್ನಲೆ ಸೋಂಕಿತರಿದ್ದ ಮನೆ ಬಳಿ ಸಂಪೂರ್ಣವಾಗಿ ಸೀಲ್ ಡೌನ್ ಮಾಡಿದ್ದು, ಅಕ್ಕ ಪಕ್ಕದ ಏರಿಯಾದಲ್ಲಿ ಭಯದ ಕರಿಚಾಯೇ ಆವರಿಸಿಕೊಂಡಿದೆ.
ಯುಕೆಯಿಂದ ಬಂದಿದ್ದ ಒಂದೇ ಕುಟುಂಬದ ಮೂವರಿಗೆ ಕೊರೋನಾ ಪಾಸಿಟೀವ್ ಬಂದಿದ್ದು, ಅವರನ್ನು ನಿಮ್ಯಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತರು ವಾಸಮಾಡುತ್ತಿದ್ದ ವಸಂತಪುರದ ವಿಠಲ್ ನಗರದ ಶ್ರೀ ಎಂಬಸ್ಸಿ ಅಪಾರ್ಟ್ ಮೆಂಟ್ ಹಾಗೂ ಎರಡು ಅಕ್ಕಪಕ್ಕದ ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಇನ್ನೂ ಕೊರೋನಾ ಇಳಿಮುಖವಾಗುತ್ತಿದ್ದಂತೆ ಸೀಲ್ ಡೌನ್ ಕೈ ಬಿಟ್ಟಿದ್ದ ಬಿಬಿಎಂಪಿ ಇದೀಗಾ ಬ್ರಿಟನ್ ವೈರಸ್ ಭೀತಿಯಿಂದಾಗಿ ಸೀಲ್ ಡೌನ್ ನಿಯಮವನ್ನು ಮತ್ತೆ ಮುಂದುವರಿಸುತ್ತಿದೆ. ಇನ್ನೂ ಸೀಲ್ ಡೌನ್ ಪ್ರದೇಶದಲ್ಲಿ ಒಬ್ಬರು ಪೋಲೀಸ್, ಆಶಾಕಾರ್ಯಕರ್ತೆಯರು , ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಹಾಗೂ ಅಗತ್ಯ ಸೌಲಭ್ಯಗಳನ್ನ ಪೋರೈಸಲು ಸಿಬ್ಬಂಧಿಗಳನ್ನ ಕೂಡ ನೇಮಕಮಾಡಿದ್ದು, ಸೀಲ್ ಡೌನ್ ಪ್ರದೇಶಕ್ಕೆ ವಿಶೇಷ ಆಯುಕ್ತರು ಸೇರಿದಂತೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿದರು.
ಇನ್ನೂ ಮೂವರು ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 14 ಮಂದಿ ಹಾಗೂ ದ್ವೀತಿಯ ಸಂಪರ್ಕದಲ್ಲಿ 42 ಮಂದಿಯ ಡಿಟೇಲ್ಸ್ ಪಡೆದು ಹೋಂ ಕ್ವಾರಟೈನ್ ಮಾಡಲಾಗುತ್ತಿದೆ. ಇದರೊಂದಿಗೆ ಅಪಾರ್ಟ್ ಮೆಂಟ್ ನಲ್ಲಿ ಒಟ್ಟು 39 ಜನರು ವಾಸ ಮಾಡುತ್ತಿದ್ದಾರೆ. ಹೀಗಾಗಿ ಅಪಾರ್ಟ್ ಮೆಂಟ್ ನ ಪ್ರತಿಯೊಬ್ಬ ನಿವಾಸಿ ಸೇರಿದಂತೆ ಅಕ್ಕ ಪಕ್ಕದ ಮನೆಯ ನಿವಾಸಿಗಳಿಗೂ ಕೊರೋನಾ ಟೆಸ್ಟ್ ಮಾಡಿಸಲಾಗುತ್ತಿದೆ. ಇನ್ನೂ ಪ್ರತಿಯೊಬ್ಬರಿಗೂ ಕೊರೋನಾ ಟೆಸ್ಟ್ ಮಾಡಿಸಬೇಕು ಎನ್ನುವ ದೃಷ್ಟಿಯಿಂದ ಮುಖ್ಯ ರಸ್ತೆಗಳಲ್ಲಿ ಆರೋಗ್ಯ ಅಧಿಕಾರಿಗಳು ಬಿಡಾರ ಸಹ ಹಾಕಿರುವುದನ್ನ ಕಂಡು ವಸಂಸಪುರದ ನಿವಾಸಿಗಳು ಭಯದಲ್ಲಿ ಬದುಕುವಂತಾಗಿದೆ.
ಒಟ್ಟಾರೆಯಾಗಿ 14 ದಿನಗಳ ಕಾಲ ಅಪಾರ್ಟ್ ಮೆಂಟ್ ನ ನಿವಾಸಿಗಳನ್ನು ಕ್ವಾರಟೈನ್ ಮಾಡಿದ್ದು, ತಮಗೆ ಬೇಕಾದ ಅಗತ್ಯವಸ್ತುಗಳನ್ನು ಪಡೆಯಲು ಆನ್ ಲೈನ್ ಮೊರೆ ಹೋಗಿದ್ದಾರೆ. ಇಂದು ಬೆಳ್ಳಗ್ಗೆಯಿಂದಲೂ ವಸಂತನಗರದ ಅಕ್ಕಪಕ್ಕದ ಜನರಿಗೆ ಟೆಸ್ಟ್ ಮಾಡಿದುತ್ತಿದ್ದು, ಅಗತ್ಯ ಕ್ರಮವನ್ನು ಕೈಗೊಳ್ಳಲಾಗುತ್ತಿದೆ.