Friday, October 7, 2022
Powertv Logo
Homeರಾಜ್ಯರಾಜ್ಯದಲ್ಲಿ ಒಂದೇ ದಿನ 34 ಜನರಿಗೆ ಕೊರೋನಾ : ಬೆಳಗಾವಿಯಲ್ಲಿ ಅತೀ ಹೆಚ್ಚು ಪ್ರಕರಣ ಪತ್ತೆ

ರಾಜ್ಯದಲ್ಲಿ ಒಂದೇ ದಿನ 34 ಜನರಿಗೆ ಕೊರೋನಾ : ಬೆಳಗಾವಿಯಲ್ಲಿ ಅತೀ ಹೆಚ್ಚು ಪ್ರಕರಣ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಇಂದು ಒಂದೇ ದಿನದಲ್ಲಿ 34 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 313ಕ್ಕೆ ಏರಿಕೆಯಾಗಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ ಬೆಳಗಾವಿಯಲ್ಲಿ ಗಣನೀಯ ಮಟ್ಟದಲ್ಲಿ ಏರಿಕೆಯಾಗಿದ್ದು, ಒಂದೇ ದಿನ 17 ಮಂದಿಗೆ ಸೋಂಕು ತಗುಲಿದೆ. ಇನ್ನುಳಿದಂತೆ ಬೆಂಗಳೂರು ನಗರದಲ್ಲಿ 5 ಜನರಲ್ಲಿ ಸೋಂಕು ದೃಢಪಟ್ಟಿದೆ. ವಿಜಯಪುರದಲ್ಲಿ 7 ಜನರಿಗೆ ಸೋಂಕು ತಗುಲಿದ್ದು, ಮೈಸೂರಲ್ಲಿ 3 ಕೇಸ್​ಗಳು ಪತ್ತೆಯಾಗಿದ್ದಾರೆ. ಇನ್ನು ಗದಗ ಹಾಗೂ ಕಲಬುರಗಿಯಲ್ಲಿ ತಲಾ ಒಬ್ಬರಲ್ಲಿ ಕೋವಿಡ್ -19 ಪತ್ತೆಯಾಗಿದೆ.

ಇನ್ನು ಇಂದು ಪತ್ತೆಯಾದ 34 ಕೊರೋನಾ ಸೋಂಕಿತರಲ್ಲಿ 15 ಜನ ಮಹಿಳೆಯರು ಆಗಿದ್ದಾರೆ. ಅಲ್ಲದೆ ಸಣ್ಣ ವಯಸ್ಸಿನವರಲ್ಲೇ ಸೋಂಕು ಕಂಡು ಬಂದಿದೆ. ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ 8 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅದರಲ್ಲೂ ಬೆಳಗಾವಿಯಲ್ಲಿ ಕಂಡುಬಂದ 17 ಮಂದಿಗೂ ತಬ್ಲಿಘಿ ಜಮಾತ್​ನ ನಂಟು ಇತ್ತೆಂಬುದು ತಿಳಿದುಬಂದಿದೆ.

ವಿಜಯಪುರದಲ್ಲಿ ಇಂದು 7 ಕೇಸ್​ಗಳು ಪತ್ತೆಯಾಗಿದ್ದು, ಅದರಲ್ಲಿ ಒಂದು ಕೇಸ್ ಒಂದೂವರೆ ವರ್ಷದ ಹೆಣ್ಣು ಮಗು ಹಾಗೂ 13 ವರ್ಷದ ಬಾಲಕನಿಗೆ ಸೋಂಕು ತಗುಲಿದೆ. ಕಲಬುರಗಿಯಲ್ಲಿ 23 ವರ್ಷದ ಯುವತಿಯಲ್ಲಿ ಸೋಂಕು ಪತ್ತೆಯಾಗಿದೆ. ಮೈಸೂರಿನಲ್ಲಿ 26 ವರ್ಷದ ಯುವಕನಲ್ಲಿ ಸೋಂಕು ಕಂಡುಬಂದಿದೆ. ಇನ್ನು ಬೆಂಗಳೂರಿನಲ್ಲಿ 13 ವರ್ಷದ ಬಾಲಕ ಹಾಗೂ ಬೆಳಗಾವಿಯಲ್ಲಿ 16 ವರ್ಷದ ಯುವತಿಯಲ್ಲಿ ಸೋಂಕು ದೃಢಪಟ್ಟಿದೆ.

 

8 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments