ಬಳ್ಳಾರಿ: ರಾಜ್ಯದಾದ್ಯಂತ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು, ಗ್ರೀನ್ ಝೋನ್ಗಳಲ್ಲು ಕೊರೋನಾ ತನ್ನ ಕದಂಬ ಬಾಹು ಚಾಚುತ್ತಿದೆ. ಕೊರೋನಾ ಸೋಂಕಿನಿಂದ ಬಲಿಯಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಬಳ್ಳಾರಿಯಲ್ಲಿ ಕಿಲ್ಲರ್ ಕೊರೋನಾ ತನ್ನ ಮೊದಲ ಬಲಿ ಪಡೆದುಕೊಂಡಿದೆ.
ಪೇಷೆಂಟ್ ನಂಬರ್ 1185 ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಸೋಂಕಿತ ವೃದ್ಧ (61) ಇಂದು ಮೃತಪಟ್ಟಿದ್ದು, ಕಳೆದ 2 ದಿನಗಳ ಹಿಂದೆ ವೃದ್ಧನಲ್ಲಿ ಸೋಂಕು ಪತ್ತೆಯಾಗಿತ್ತು. ಹಾಗಾಗಿ ಬಳ್ಳಾರಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.
3oversight