Home uncategorized ಡಿ.ಎ.ಆರ್ ಪೋಲಿಸ್ ಕ್ವಾಟ್ರಸ್  ನಲ್ಲಿ ಕರೋನಾ ಕಾಟ

ಡಿ.ಎ.ಆರ್ ಪೋಲಿಸ್ ಕ್ವಾಟ್ರಸ್  ನಲ್ಲಿ ಕರೋನಾ ಕಾಟ

ಚಿತ್ರದುರ್ಗ :  ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಪೋಲಿಸರನ್ನು ಕೊರೊನಾ ಮಹಾಮಾರಿ ಬಿಟ್ಟು ಬಿಡದೆ ಕಾಡುತ್ತಿದೆ. ಇಂದು ಕೂಡ ಚಿತ್ರದುರ್ಗ ನಗರದ DAR ಕ್ವಾಟ್ರಸ್ ನಲ್ಲಿ ವಾಸವಿದ್ದ ಪೇದೆಯ ಕುಟುಂಬ ನಾಲ್ವರಿಗೆ ಕೊರೊನಾ ಸೋಂಕು ತಗುಲಿದೆ.  ಕಳೆದೆರಡು ದಿನದ ಹಿಂದೆ ವೈಯರ್ಲೆಸ್ ಪಿಎಸ್ ಐ ಗೆ ಸೋಂಕು ದೃಢಪಟ್ಟಿತ್ತು. ಆತನ ಸಂಪರ್ಕ ಹೊಂದಿದ್ದ ಪೇದೆಯ 110 ವರ್ಷದ ಅಜ್ಜಿ 07 ತಿಂಗಳ ಅಣ್ಣನ ಮಗು, ಅತ್ತಿಗೆ ಮತ್ತು ತಾಯಿಗೆ ಸೋಂಕು ಧೃಡಪಟ್ಟಿದೆ. ಹೀಗಾಗಿ ಒಂದು ವಾರದ ಹಿಂದೆ ಡಿಎಆರ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದ ಹಿನ್ನೆಲೆಯಲ್ಲಿ ಸೀಲ್ ಡೌನ್ ಆಗಿದ್ದ ಡಿಎಆರ್ ಕ್ವಾಟ್ರಸ್ ನಲ್ಲಿ ಸೀಲ್ ಡೌನ್  ಮುಂದುವರೆಸಲಾಗಿದ್ದು, ಚಿತ್ರದುರ್ಗದ ಕೋಟೆ ಠಾಣೆಯಲ್ಲಿ ಕೂಡ ಓರ್ವ ಪೊಲೀಸ್ ಪೇದೆಗೆ ಕೊರೊನಾ ಧೃಡಪಟ್ಟಿದ್ದು, ಮೊಳಕಾಲ್ಮೂರು ಠಾಣೆಯ ಇಬ್ವರು ಪೊಲೀಸರಿಗೂ ಸೋಂಕು ದೃಢಪಟ್ಟಿದೆ. ಒಟ್ಟಾರೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು  564 ಕ್ಕೆ ಎರಿದ್ದು, ಇಂದು ಮತ್ತಷ್ಟು ಪಾಸಿಟಿವ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಇದುವರೆಗೆ ಕೋರೋನಾ ಮಹಾಮಾರಿ 10 ಜನರನ್ನು ಬಲಿ ಪಡದಿದೆ. 151 ಜನರು ಗುಣಮುಖರಾಗಿದ್ದಾರೆ. 303 ಕೊರೊನಾ ಆಕ್ಟೀವ್ ಪ್ರಕರಣಗಳಿರುವ ಹಿನ್ನೆಲೆಯಲ್ಲಿ 132 ಕಂಟೋನ್ನೆಂಟ್  ಝೋನ್ ಗಳನ್ನು ನಿರ್ಮಾಣ ಮಾಡಲಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

ಡ್ರಗ್ ಜಾಲದ ಹಿಂದೆ ದೊಡ್ಡ ದೊಡ್ಡ ಕುಳಗಳಿವೆ: ಇಂದ್ರಜಿತ್ ಲಂಕೇಶ್

ಬೆಂಗಳೂರು: ಡ್ರಗ್ಸ್ ಜಾಲದ ಹಿಂದೆ ದೊಡ್ಡ ಕುಳಗಳಿವೆ ಎಂದು ಇಂದ್ರಜಿತ್ ಲಂಕೇಶ್ ಕಮೀಷನರ್ ಕಚೇರಿ ಬಳಿ ಹೇಳಿದ್ದಾರೆ. ಡ್ರಗ್ಸ್ ಜಾಲದಲ್ಲಿ ಸಣ್ಣ ಸಣ್ಣ ಮೀನು ಹಿಡಿದಿದ್ದಾರೆ. ಡೊಡ್ಡವರನ್ನು ಹಿಡಿಯಬೇಕು ಎಂದಿದ್ದಾರೆ. ಡಿಸಿಪಿ ಬಸವರಾಜ್ ಅಂಗಡಿ...

‘ಶಾಲಾ ಶುಲ್ಕದ ವಿಚಾರವಾಗಿ ಸರ್ಕಾರಕ್ಕೆ ಡೆಡ್‌ ಲೈನ್ ಕೊಟ್ಟ ಪೋಷಕರು’

ಬೆಂಗಳೂರು: ಖಾಸಗಿ ಶಾಲಾ ಶುಲ್ಕದ ಟಾರ್ಚರ್ ಹಿನ್ನಲೆಯಲ್ಲಿ ಶುಲ್ಕದ ವಿಚಾರವಾಗಿ ಪೋಷಕರು ಸರ್ಕಾರಕ್ಕೆ ಡೆಡ್ ಲೈನ್ ಕೊಟ್ಟಿದ್ದಾರೆ. ಶಾಲಾ ಶುಲ್ಕದ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಪೋಷಕರು ಆಗ್ರಹಿಸಿದ್ದಾರೆ. ಈ ಹಿಂದೆ ಮೂರು ಭಾರಿ...

‘ಒಂದೇ ಕುಟುಂಬದ ನಾಲ್ವರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ’

ರಾಯಬಾಗ: ರೈಲಿಗೆ ತಲೆ ಕೊಟ್ಟು ಒಂದೇ ಕುಟುಂಬದ 4 ಜನ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆಯೊಂದು ನಡೆದಿದೆ.  ಬೆಳಗಾವಿ ಜಿಲ್ಲೆ ರಾಯಬಾಗ ರೈಲು ನಿಲ್ದಾಣ ಬಳಿ ಈ ಘಟನೆ ನಡೆದಿದ್ದು,  ವೃದ್ಧ ತಂದೆ, ತಾಯಿ,...

ಕುಡಿದ ಮತ್ತಿನಲ್ಲಿ ಜಗಳ ಯುವಕರಿಬ್ಬರ ಮೇಲೆ ಮಾರಾಣಾಂತಿಕ ಹಲ್ಲೆ : ಓರ್ವ ಸಾವು

ಶಿವಮೊಗ್ಗ: ಕುಡಿದ ಮತ್ತಿನಲ್ಲಿ ಬೆಳೆದ ಮಾತಿಗೆ ಮಾತು, ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.  ನಗರದ ಎನ್.ಟಿ. ರಸ್ತೆಯ ಸುಂದರ ಆಶ್ರಯ ಪಕ್ಕದ ವಿಠಲ ದೇವಾಲಯದ ಬಳಿಯೇ ಈ ಘಟನೆ ನಡೆದಿದ್ದು, ಐದಾರು ಯುವಕರ ತಂಡ...

Recent Comments