Home ರಾಜ್ಯ ಮೊಹರಂಗೆ ಕೊರೋನಾ ಎಫೆಕ್ಟ್- ಮಂದಿ ಸೇರಿಸೋಂಗಿಲ್ಲ, ಬಣ್ಣ ಹಚ್ಚಿ ಕುಣಿಯೋಂಗಿಲ್ಲ!

ಮೊಹರಂಗೆ ಕೊರೋನಾ ಎಫೆಕ್ಟ್- ಮಂದಿ ಸೇರಿಸೋಂಗಿಲ್ಲ, ಬಣ್ಣ ಹಚ್ಚಿ ಕುಣಿಯೋಂಗಿಲ್ಲ!

ಬಾಗಲಕೋಟೆ : ಪ್ರತಿವರ್ಷ ಮೊಹರಂ ಹಬ್ಬ ಬಂತೆಂದ್ರೆ ಮೈತುಂಬ ಹುಲಿಬಣ್ಣ ಬಳಿದುಕೊಂಡು ಕುಣಿಯಬೇಕಿದ್ದ ಯುವಕರೆಲ್ಲಾ ಈ ವರ್ಷ ಕೈಗೆ ಮಾತ್ರ ಬಣ್ಣ ಹಚ್ಚಿಕೊಳ್ತಿದ್ದಾರೆ. ಮೊಹರಂ ಹಬ್ಬಕ್ಕೆ ಬಣ್ಣ ಹಚ್ಚುತ್ತಿದ್ದವರ ಕೈಗೆಳೆಲ್ಲಾ ಈ ಬಾರಿ ಖಾಲಿ ಖಾಲಿಯಾಗಿವೆ. ಇವುಗಳ ಮಧ್ಯೆ ಯಾವುದೇ ವಾಧ್ಯಗಳಿಲ್ಲ, ಹೆಜ್ಜೆ ಕುಣಿತಗಳಿಲ್ಲ, ಹೌದು. ಇಂತಹವೊಂದು ಕಳೆಗುಂದಿದ ಮೊಹರಂ ಹಬ್ಬ ಕಂಡು ಬಂದಿದ್ದು ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ. ಪ್ರತಿವರ್ಷ ಮೊಹರಂ ಬಂದ್ರೆ ಸಾಕು ಓಣಿ ಓಣಿಗಳಲ್ಲೂ ಹಿಂದೂ ಮುಸ್ಲಿಂ ಯುವಕರೆಲ್ಲಾ ಜಾತಿ ಮತ ಭೇದ ಮರೆತು ಒಂದಾಗಿ ಓಡಾಡಿ ಮೊಹರಂ ಹಬ್ಬ ಮಾಡ್ತಿದ್ರು. ಹರಕೆ ತೊಟ್ಟವರೆಲ್ಲಾ ಬರುವ ವರ್ಷ ತಮ್ಮ ಇಷ್ಟಾರ್ಥ ಈಡೇರಿದ್ರೆ ಈ ಅಲೆದೇವರುಗಳಿಗೆ ಹರಕೆ ತೀರಿಸಲೆಂದೆ ಮಕ್ಕಳು, ಯುವಕರೆಲ್ಲಾ ಸೇರಿ ಮೈತುಂಬ ಹುಲಿಬಣ್ಣವನ್ನು ಹಚ್ಚಿಕೊಂಡು ದೇವರ ಮುಂದೆ ಹುಲಿಹೆಜ್ಜೆ ಕುಣಿತ ಹಾಕುತ್ತಿದ್ದರು. ಆದರೆ ಈ ಬಾರಿ ಅದ್ಯಾವುದಕ್ಕೂ ಅವಕಾಶಗಳೇ ಇಲ್ಲ. ಇಷ್ಟಕ್ಕೆಲ್ಲಾ ಕಾರಣವಾಗಿರೋದು ಕೊರೋನಾ ಎಫೆಕ್ಟ್.

ಇನ್ನು ಬಾಗಲಕೋಟೆ ಜಿಲ್ಲೆಯಲ್ಲೂ ಕೊರೋನಾ ಕೇಸ್​ ಬಹಳ ಇರೋದ್ರಿಂದ ಈ ಬಾರಿ ಜಿಲ್ಲಾಡಳಿತವೂ ಸಹ ಯಾವುದೇ ಹಬ್ಬಗಳನ್ನು ಅದ್ಧೂರಿಯಾಗಿ ಮಾಡೋಕೆ ಬಿಡ್ತಿಲ್ಲ. ಹೀಗಾಗಿ ಮೊಹರಂ ಹಬ್ಬಕ್ಕೂ ಸಹ ಜನ ಸೇರಿ ಮೆರವಣಿಗೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಿದೆ. ಇವುಗಳ ಮಧ್ಯೆ ವಿಶೇಷ ಹೆಜ್ಜೆ ಕುಣಿತ ಇಲ್ಲವಾಗಿದ್ದು, ಹೀಗಾಗಿ ಜನ್ರು ಸಹ ಈ ಬಾರಿ ಮೈತುಂಬ ಹುಲಿಬಣ್ಣ ಹಚ್ಚಿಕೊಳ್ಳಲು ಮುಂದಾಗಿಲ್ಲ, ಬದಲಾಗಿ ಕೇವಲ ಕೈಗಳಿಗೆ ಮಾತ್ರ ಬಣ್ಣ ಹಚ್ಚಿ ಸಾಂಪ್ರದಾಯಿಕವಾಗಿ ಮಾತ್ರ ಬಣ್ಣ ಹಚ್ಚಿ ಹಬ್ಬವನ್ನು ಮುಗಿಸುತ್ತಿದ್ದಾರೆ. ಇದರಿಂದ ಮೊಹರಂ ಹಬ್ಬದಲ್ಲಿ ಬಹುತೇಕ ಬಣ್ಣ ಹಚ್ಚಿ ತಮ್ಮ ಹೊಟ್ಟೆ ಉಪಜೀವನಕ್ಕೆ ಆಧಾರ ಮಾಡಿಕೊಳ್ಳುತ್ತಿದ್ದ ಕುಟುಂಬಗಳು ಈ ಬಾರಿ ಮೊಹರಂ ಹಬ್ಬದಲ್ಲೂ ಅತಂತ್ರವಾಗಿದ್ದು, ಕೊರೋನಾ ಎಫೆಕ್ಟ್​ನಿಂದ ತೊಂದರೆಯಾಗಿದೆ.

-ನಿಜಗುಣ ಮಠಪತಿ

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments