ಬೆಂಗಳೂರು: ಕೊರೋನಾ ಭೀತಿ ಹಿನ್ನೆಲೆ ಎಚ್ಚೆತ್ತುಕೊಡಿರುವ ರಾಜ್ಯ ಸರ್ಕಾರ ನಾಳೆಯಿಂದ ಒಂದು ವಾರಗಳ ಕಾಲ ಸ್ತಬ್ಧವಾಗಲಿದೆ. ಯಾವುದೇ ಮಾಲ್ಗಳು, ಥಿಯೇಟರ್ ಹಾಗೂ ಮದುವೆ ಸಮಾರಂಭಗಳು ಅಥವಾ ಇನ್ನಿತರ ಯಾವುದೇ ಸಭೆಗಳನ್ನು ನಡೆಸದಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆದೇಶ ನೀಡಿದ್ದಾರೆ.
ವಿಧಾನಸೌಧದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ಒಂದು ವಾರಗಳ ಕಾಲ ಪಬ್, ಥಿಯೇಟರ್, ಬೇಸಿಗೆ ಶಿಬಿರಗಳು, ಮಾಲ್ಸ್ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ನಡೆಸದಂತೆ ಆದೇಶಿಸಿದ್ದಾರೆ. ಶಾಲಾ ಕಾಲೇಜುಗಳಿಗೂ ಒಂದು ವಾರದ ಕಾಲ ರಜೆ ಘೋಷಣೆಯನ್ನು ಮಾಡಲಾಗಿದ್ದು, ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷಗಳು ಈಗಾಗಲೇ ನಿಗದಿಯಾಗಿರುವಂತೆ ನಡೆಯಲಿದೆ ‘ಎಂದು ಹೇಳಿದ್ದಾರೆ.