ಕರೋನಾದಿಂದ ಬಚಾವಾಗಲು ಇರುವ ಬಹು ಮುಖ್ಯ ಅಸ್ತ್ರ ಎಂದರೆ ಅದು ಫೇಸ್ ಮಾಸ್ಕ್. ಎಲ್ಲರೂ ಫೇಸ್ ಮಾಸ್ಕ್ ಬಳಸಿ ಎಂದು ಸರ್ಕಾರ ಸೇರಿದಂತೆ, ಸಾಕಷ್ಟು ಮಂದಿ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಇಲ್ಲೊಂದು ಹೊಟೆಲ್ ವಿಶಿಷ್ಟ ರೀತಿಯಲ್ಲಿ ಫೇಸ್ ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ತಮಿಳು ನಾಡಿನ ಮಧುರೈನಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಮಾಸ್ಕ್ ಪರಾಟಾ ಮಾಡಿ ಜನರಿಗೆ ಫೇಸ್ಕ್ ಮಾಸ್ಕ್ ನ ಅವಶ್ಯಕತೆ ಬಗ್ಗೆ ತಿಳಿಹೇಳುತ್ತಿದ್ದಾರೆ. ಈ ಪರಾಟಾ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲವರು ಇದನ್ನು ಕರೋನಾ ಖಾದ್ಯ ಅಂತಲೂ ಕರೀತಿದ್ದಾರೆ.
ಇದು ಮಾಸ್ಕ್ ಪರಾಟಾ ಕಥೆಯಾದ್ರೆ, ಕಳೆದ ಏಪ್ರಿಲ್ ನಲ್ಲಿ ಕರೋನಾ ಸ್ಪೆಶಲ್ ಸ್ವೀಟ್ ಕೂಡ ಗಮನ ಸೆಳೆದಿತ್ತು. ಕೋಲ್ಕತ್ತಾದ ಸ್ವೀಟ್ ಶಾಪ್ ನಲ್ಲಿ ಕರೋನಾ ಸಂದೇಶ್ ಎಂಬ ಸಿಹಿ ತಿಂಡಿ ಸಾಕಷ್ಟು ಸುದ್ದಿಯಾಗಿತ್ತು. ಸಿಎಂ ಮಮತಾ ಬ್ಯಾನರ್ಜಿ ಅವರು, ಲಾಕ್ ಡೌನ್ ನಡುವೆಯೂ ಸ್ವೀಟ್ ಶಾಪ್ ಗಳನ್ನು 4 ಗಂಟೆ ತೆರೆಯಲು ಅನುಮತಿ ನೀಡಿದ್ದ ಸಂದರ್ಭದಲ್ಲಿ ಕರೋನಾ ಸಂದೇಶ್ ಸ್ವೀಟ್ ಹೆಚ್ಚು ಬಿಕರಿಯಾಗಿತ್ತು. ಇದನ್ನು ಮಿಠಾಯಿ ಅಂಗಡಿಗೆ ಬರೋರಿಗೆ ಉಚಿತವಾಗಿಯೂ ನೀಡಿದ್ರು ಅಂಗಡಿ ಮಾಲೀಕರು.