Home ರಾಜ್ಯ ರೋಡ್ ಮೇಲೆ ಅಡುಗೆ ಮಾಡ್ತಿದ್ದೀವಿ...ಗ್ಯಾಸ್ ಬೆಲೆ ಕಡಿಮೆ ಮಾಡ್ರಿ..!

ರೋಡ್ ಮೇಲೆ ಅಡುಗೆ ಮಾಡ್ತಿದ್ದೀವಿ…ಗ್ಯಾಸ್ ಬೆಲೆ ಕಡಿಮೆ ಮಾಡ್ರಿ..!

ಹುಬ್ಬಳ್ಳಿ: ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ತೈಲ ಬೆಲೆ ಏರಿಕೆ ಮಾಡುತ್ತಿರುವುದನ್ನು ಖಂಡಿಸಿ ಹು-ಧಾ ಮಹಿಳಾ ಕಾಂಗ್ರೆಸ್ ಸಮಿತಿಯಿಂದ ರಸ್ತೆಯಲ್ಲಿಯೇ ಕಟ್ಟಿಗೆ ಹೊತ್ತಿಸಿ ಅಡುಗೆ ಮಾಡುವ ಮೂಲಕ ಹಳೇ ಹುಬ್ಬಳ್ಳಿಯ ಇಂಡಿ ಪಂಪ ಎದುರು ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಕಾರ್ಯಕರ್ತರು‌ ತೆಲೆ ಮೇಲೆ ಕಟ್ಟಿಗೆ ಹೊತ್ತು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಕೂಡಲೇ ತೈಲ ಬೆಲೆ ಇಳಿಸುವಂತೆ ಒತ್ತಾಯಿಸಿದರು.

ತೈಲ ಬೆಲೆ ಹಾಗೂ ದಿನ ಬಳಕೆಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಿರುವುದು ಸಾರ್ವಜನಿಕ ಜನಜೀವನದ ಮೇಲೆ ಹೊರೆಯಾಗುತ್ತಿದೆ. ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಟು ಆರ್ಥಿಕ ಸಂಕಷ್ಟ ಅನುಭವಿಸಿದ ಜನರಿಗೆ ಬೆಲೆ ಏರಿಕೆ ಜೀವ ಹಿಂಡುತ್ತಿದೆ. ಕೂಡಲೇ ಬೆಲೆ ಏರಿಕೆ ನಿರ್ಧಾರವನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.

LEAVE A REPLY

Please enter your comment!
Please enter your name here

- Advertisment -

Most Popular

ನಿಖಿಲ್ ಕುಮಾರ್ ಸ್ವಾಮಿಗೂ ಕೊರೋನಾ ಪಾಸಿಟಿವ್

ಬೆಂಗಳೂರು : ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರ್ ಸ್ವಾಮಿ ಅವರಿಗೂ ಕೊರೋನಾ ಪಾಸಿಟಿವ್ ವರದಿಯಾಗಿತ್ತು ಈಗ ನಿಖಿಲ್ ಅವರಿಗೂ ಪಾಸಿಟಿವ್ ಬಂದಿದೆ. ಇಂದು ನಿಖಿಲ್ ಅವರ ಮೊದಲನೇ ವಾರ್ಷಿಕೋತ್ಸವವೂ ಆಗಿದೆ.  ನಾನು ಇಂದು...

ವಿವಾಹಕ್ಕೆ 100 – 200, ಅಂತ್ಯಸಂಸ್ಕಾರಕ್ಕೆ 25 – 50 ಜನ ಮಾತ್ರ

ಬೆಂಗಳೂರು : ಸಿಎಂ ಯಡಿಯೂರಪ್ಪನವರು ಕೊರೋನಾ ಕಾರಣದಿಂದ ಆಸ್ಪತ್ರೆಗೆ ದಾಖಲಾದ ಕಾರಣ ಸಚಿವ ಸುಧಾಕರ್ ಮತ್ತು ಬೊಮ್ಮಾಯಿ ಅವರು ಸಭೆ ನಡೆಸಿ ರಾಜ್ಯದಲ್ಲಿ ಇನ್ಮೇಲೆ ಟಫ್ ರೂಲ್ಸ್ ಶುರುವಾಗಲಿದೆ ಎಂಬ ಮಾಹಿತಿ ನೀಡಿದ್ದಾರೆ.  ಕೊವಿಡ್ ನಿಯಮ...

ಕೊರೋನಾ ಇಲ್ಲ ಅಂದವರ ಕಪಾಳಕ್ಕೆ ಬಾರಿಸಿ: ಸುನೇತ್ರ

ಬೆಂಗಳೂರು: ಕೊರೋನಾಗೆ ನಟಿ ಸುನೇತ್ರ ಪಂಡಿತ್ ಸಹೋದರಿ ಸಾವನ್ನಪ್ಪಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಎಂದು ನಟಿ ಸುನೇತ್ರ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರೋ ಓರ್ವ ಅಧಿಕಾರಿಯಿಂದ ನನ್ನ ಸಹೋದರಿ ಸಾವಾಗಿದೆ ಎಂದು ಸುಮನಹಳ್ಳಿ ಚಿತಾಗಾರ...

‘ಹೆಚ್.ಡಿ.ಕುಮಾರಸ್ವಾಮಿಗೆ ಕೊರೋನಾ ದೃಡ’     

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಕೊರೋನಾ ದೃಡ ಪಟ್ಟಿದೆ. ಸಂಪರ್ಕದಲ್ಲಿದ್ದವರಿಗೆ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಟ್ವೀಟ್ ಮೂಲಕ ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.  ಕುಮಾರಸ್ವಾಮಿ ಶೀಘ್ರವಾಗಿ ಆರೋಗ್ಯ ಸುಧಾರಣೆ ಆಗಲಿ ಎಂದು ಗಣ್ಯರು...

Recent Comments