ಶಿವಮೊಗ್ಗ : ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆ.ಎಸ್.ಈಶ್ವರಪ್ಪರ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪಟ್ಟು ಹಿಡಿದಿದೆ. ಪ್ರಕರಣದಿಂದ ಮುಕ್ತಿಸಿಗಲು ಮಾಜಿ ಸಚಿವ ಈಶ್ವರಪ್ಪ ದೇವರ ಮೊರೆ ಹೋಗುತ್ತಿದ್ದಾರೆ.
ಇದರ ಮಧ್ಯೆ ಈಶ್ವರಪ್ಪ ಪ್ರಕರಣದಿಂದ ದೋಷ ಮುಕ್ತರಾಗಲಿ ಎಂದು ಶಿವಮೊಗ್ಗದಲ್ಲಿ ಮಹಿಳಾ ಕಾರ್ಯಕರ್ತೆಯರು ಕೋಟೆ ಮಾರಿಕಾಂಬೆಗೆ 101 ಈಡುಗಾಯಿ ಒಡೆದು ಈಶ್ವರಪ್ಪ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಿದರು.
ಮಾರಿಕಾಂಬಾ ಮೈಕ್ರೋ ಫೈನಾನ್ಸ್ನ ಮಹಿಳೆಯರು ನೆಚ್ಚಿನ ನಾಯಕ ಆರೋಪ ಮುಕ್ತರಾಗಿ ಹೊರಬರುವ ಜತೆಗೆ ಮತ್ತೆ ಸಚಿವರಾಗಲಿ ಅಂತಾ ದೇವರಲ್ಲಿ ಪ್ರಾರ್ಥಿಸಿದರು. ಇಂದು ಬೆಳಗ್ಗೆಯಿಂದಲೇ, ಹೋಮ-ಹವನ ಮಾಡಿಸಿದ್ದು, ವಿಶೇಷ ಪೂಜೆ ನೆರವೇರಿಸಿದ್ದಾರೆ.