Homeದೇಶ-ವಿದೇಶ‘ಉತ್ತರಾಖಂಡದಲ್ಲಿ ಹಿಮ ಕುಸಿತ ಮುಂದುವರೆದ ಶೋಧ ಕಾರ್ಯ’

‘ಉತ್ತರಾಖಂಡದಲ್ಲಿ ಹಿಮ ಕುಸಿತ ಮುಂದುವರೆದ ಶೋಧ ಕಾರ್ಯ’

ಉತ್ತರಾ ಖಂಡ್ : ಉತ್ತರಾ ಖಂಡ್​ನಲ್ಲಿ ಇದ್ದಕ್ಕಿದಂತೆ ಹಿಮ ಕುಸಿದಿದ್ದು, ಪ್ರವಾಹ ಶುರುವಾಗಿದೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಜನರು ಸಾವನ್ನಪಿದ್ದು, ನೂರಾರು ಮಂದಿ ಕಣ್ಮರೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಯೂ ಚುರುಕುಗೊಂಡಿದೆ.

ಉತ್ತರಾಖಂಡ್​ ಚಮೋಲಿ ಜಿಲ್ಲೆಯಲ್ಲಿ ಭಾರೀ ಅವಘಡ ಒಂದು ನಡೆದು ಹೋಗಿದೆ. ನಂದಾದೇವಿ ಪರ್ವತದ ಒಂದು ಭಾಗದಲ್ಲಿ ಹಿಮ ಕುಸಿದಿರೋದ್ರಿಂದ ಏಕಾಏಕಿ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಪರಿಣಾಮ ನಿತ್ಯ ನಾಲ್ಕೈದು ಅಡಿ ಎತ್ತರ ಹರಿಯುತ್ತಿದ್ದ ನೀರು ನಾಲ್ಕೈದು ಮೀಟರ್‌ ಏರಿಕೆ ಕಂಡಿದೆ. ಸಿಕ್ಕ ಸಿಕ್ಕ ಜಲಚರಗಳು, ಸಸ್ಯಕಾಶಿ ಕೊಚ್ಚಿಹೋಗಿದೆ.

ಚಮೋಲಿ ಮತ್ತು ಹರಿದ್ವಾರ ಮಧ್ಯಭಾಗದಲ್ಲಿ ಹಿಮ ಕುಸಿದಿರೋದ್ರಿಂದ ನೂರಾರು ಕೋಟಿ ನಷ್ಟ ಆಗಿದೆ. ಹೀಗೆ ಹಿಮ ಕುಸಿತವಾದ ನೀರು ಒಮ್ಮಿಂದೊಮ್ಮೆಲೆ ವಿದ್ಯುತ್  ಉತ್ಪಾದನಾ ಕೇಂದ್ರ ಮೇಲೆ ಹರಿದು ನೂರಾರು ಮಂದಿ ಕಾಣೆಯಾಗಿದ್ದಾರೆ.

ಚಮೋಲಿ ಜಿಲ್ಲೆಯ ತಪೋವನ ಬಳಿ 15 ಜನರನ್ನ ಎನ್‌ಡಿಆರ್‌ಎಫ್‌ ರಕ್ಷಿಸಿದೆ. ಇನ್ನು, ಹಿಮ ಕುಸಿತದ ರಭಸ ಎಷ್ಟಿದೆ ಅಂದ್ರೆ, ಧೌಲಿ ಗಂಗಾ ನದಿ ಉಕ್ಕಿ ಹರಿಯುತ್ತಿದೆ. ರೈನಿ ಗ್ರಾಮದ ಬಳಿ ನಡೆಯುತ್ತಿದ್ದ ರಿಷಿ ಗಂಗಾ ಪವರ್ ಪ್ರಾಜೆಕ್ಟ್​ಗೆ ಈ ಹಿಮ ಕುಸಿತದಿಂದ ಸಂಪೂರ್ಣ ಧಕ್ಕೆಯಾಗಿದೆ. ಅಲ್ಲದೇ ರೈನಿ ಗ್ರಾಮದ ತಪೋವನ ಪ್ರದೇಶವು ಹಿಮದಿಂದ ಆವರಿಸಿಕೊಂಡಿದ್ದು, ಇಲ್ಲಿ ಕೆಲಸ ಮಾಡ್ತಿದ್ದ 150ಕ್ಕೂ ಹೆಚ್ಚು ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಇವರಲ್ಲಿ ಕೆಲವರನ್ನ ರಕ್ಷಿಸಿದ್ದು, ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಹಿಮ ಕುಸಿತದಿಂದ ತಪೋವನ ಮತ್ತು ವಿಷ್ಣುಗಢ ಡ್ಯಾಂ ಸಂಪೂರ್ಣ ಕೊಚ್ಚಿ ಹೋಗಿದೆ. ಅಷ್ಟೇಅಲ್ಲ, ಚಮೋಲಿ ಜಿಲ್ಲೆಯ ಜೊತೆ ಪೌರಿ, ತೆಹ್ರಿ, ರುದ್ರಪ್ರಯಾಗ್, ಹರಿದ್ವಾರ್, ಡೆಹ್ರಾಡೂನ್ ಮೊದಲಾದ ಜಿಲ್ಲೆಗಳಿಗೂ ಪ್ರವಾಹ ಭೀತಿ ಎದುರಾಗಿದೆ. ರಿಷಿಕೇಶ್ ದಲ್ಲಿ ದೋಣಿವಿಹಾರವನ್ನ ನಿಲ್ಲಿಸಲಾಗಿದೆ. ಗಂಗಾ ನದಿ ಪಾತ್ರದ ಎಲ್ಲಾ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ನದಿ ಸಹಜ ಮಟ್ಟಕ್ಕಿಂತ ಒಂದು ಮೀಟರ್ ಎತ್ತರಕ್ಕೆ ಉಕ್ಕೇರಿ ಹರಿಯುತ್ತಿರುವುದರಿಂದ ಅಲಕನಂದ ನದಿ ಪಾತ್ರದಲ್ಲಿದ್ದ ಜನರನ್ನು ಸ್ಥಳಾಂತರ ಮಾಡಿಸಿದ್ದು, ಹೈ ಅಲರ್ಟ್​​ ಘೋಷಿಸಲಾಗಿದೆ.

ಅಲ್ಕಾನಂದ ನದಿಯಲ್ಲಿ ನೀರಿನ ಮಟ್ಟ ಏರುತ್ತಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಚಮೋಲಿ ಪೊಲೀಸರಿಂದ ಗ್ರಾಮಸ್ಥರ ಸ್ಥಳಾಂತರ ಕಾರ್ಯ ನಡೆಯುತ್ತಿದೆ. ಪೊಲೀಸರು ಧ್ವನಿವರ್ಧಕದ ಮೂಲಕ ನದಿಪಾತ್ರದಲ್ಲಿರುವ ಜನರಿಗೆ ಎಚ್ಚರಿಕೆ ಸಂದೇಶ ನೀಡಿ ಅಲ್ಲಿಂದ ತೆರಳುವಂತೆ ಸೂಚಿಸುತ್ತಿದ್ದಾರೆ. ಭಾರಿ ಹಿಮ ಸ್ಫೋಟಕ್ಕೆ ಜನ ಬೆಚ್ಚಿ ಬಿದ್ದಿದ್ದು, ಅಪಾರ ನಷ್ಟ ಉಂಟಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments