ಬೆಂಗಳೂರು ನಗರದ 25 ವಾರ್ಡ್​ಗಳು ಕಂಟೈನ್ಮೆಂಟ್ ವಾರ್ಡ್​ಗಳಿಗೆ ಸೇರ್ಪಡೆ

0
675

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲೆಗಳನ್ನು ರೆಡ್, ಆರೆಂಜ್ ಹಾಗೂ ಗ್ರೀನ್ ಝೋನ್​ಗಳಾಗಿ ವಿಂಗಡಿಸಲಾಗಿದೆ. ರಾಜ್ಯದ ಮೂರು ಜಿಲ್ಲೆಗಳು ರೆಡ್ ಝೋನ್​ ವ್ಯಾಪ್ತಿಗೆ ಸೇರ್ಪಡೆಗೊಂಡಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಮೈಸೂರು ರೆಡ್ ಝೋನ್​ನಲ್ಲಿ ಬರುತ್ತದೆ. ಇನ್ನು ರೆಡ್​ ಝೋನ್​ನಲ್ಲಿ ಬರುವ ಬೆಂಗಳೂರು ನಗರದ ವಾರ್ಡ್​ಗಳನ್ನು ಕಂಟೈನ್ಮೆಂಟ್ ವಾರ್ಡ್​ಗೆ ಸೇರಿಸಲಾಗಿದೆ.

ರೆಡ್​ ಝೋನ್​ ಬರುವ ಬೆಂಗಳೂರು ನಗರದಲ್ಲಿ ಲಾಕ್​ಡೌನ್  ಮತ್ತಷ್ಟು ಕಠಿಣಗೊಳಿಸಲಿದೆ. ಬೆಂಗಳೂರು ನಗರದಲ್ಲಿ ಒಟ್ಟು 25 ವಾರ್ಡ್​ಗಳನ್ನು ಕಂಟೈನ್ಮೆಂಟ್ ವಾರ್ಡ್​ಗೆ ಸೇರಿಸಲಾಗಿದ್ದು, ಬೊಮ್ಮನಹಳ್ಳಿಯಲ್ಲಿ 2 ವಾರ್ಡ್​ಗಳು, ಮಹದೇವಪುರದಲ್ಲಿ 2ವಾರ್ಡ್, ಬೆಂಗಳೂರು ದಕ್ಷಿಣ 10 ವಾರ್ಡ್, ಬೆಂಗಳೂರು ಪೂರ್ವ 5 ವಾರ್ಡ್, ಬೆಂಗಳೂರು ಪಶ್ಚಿಮ 4 ವಾರ್ಡ್ ಹಾಗೂ ಆರ್​.ಆರ್​ ನಗರದಲ್ಲಿ 2 ವಾರ್ಡ್​ಗಳನ್ನು ಕಂಟೈನ್ಮೆಂಟ್ ವಾರ್ಡ್​ಗಳಿಗೆ ಸೇರಿಸಲಾಗಿದೆ. ಇನ್ನು ಕಂಟೈನ್ಮೆಂಟ್ ವಾರ್ಡ್​ಗಳಲ್ಲಿ ಆಸ್ಪತ್ರೆ ಓಡಿಪಿ ಸೇರಿ ಎಲ್ಲವೂ ಬಂದ್ ಆಗಲಿದೆ. 

LEAVE A REPLY

Please enter your comment!
Please enter your name here