Monday, January 17, 2022
Powertv Logo
Homeದೇಶ100 ಕಿಮೀ ವ್ಯಾಪ್ತಿಯಲ್ಲಿ 4ಹಳ್ಳಿಗಳ ನಿರ್ಮಾಣ : ಚೀನಾ

100 ಕಿಮೀ ವ್ಯಾಪ್ತಿಯಲ್ಲಿ 4ಹಳ್ಳಿಗಳ ನಿರ್ಮಾಣ : ಚೀನಾ

ಭೂತಾನ್​ : ಗಡಿ ಪ್ರದೇಶಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಚೀನಾ ತನ್ನದೇ ಗ್ರಾಮಗಳನ್ನು ನಿರ್ಮಾಣ ಮಾಡುತ್ತಿರುವುದನ್ನು ಮುಂದುವರಿಸಿದೆ. ಇದಕ್ಕೆ ಪುಷ್ಠಿ ಎಂಬಂತೆ ಹೊಸ ಉಪಗ್ರಹ ಚಿತ್ರಗಳು ಚೀನಾದ ಸೇನಾ ಅತಿಕ್ರಮಣಗಳ ಕುರಿತಾದ ಸಂಗತಿಗಳನ್ನು ಬಯಲು ಮಾಡಿವೆ. ಕಳೆದ ಒಂದು ವರ್ಷದಲ್ಲಿ ಭೂತಾನ್ ಗಡಿ ಭಾಗದ ಒಳಗೆ ಚೀನಾ ಹಳ್ಳಿಗಳನ್ನು ನಿರ್ಮಿಸಿರುವುದನ್ನು ಈ ಉಪಗ್ರಹ ಚಿತ್ರ ಬಹಿರಂಗಪಡಿಸಿದೆ. ಸುಮಾರು ೧೦೦ ಚದರ ಕಿಮೀ ವ್ಯಾಪ್ತಿಯಲ್ಲಿ ಅನೇಕ ಹೊಸ ಹಳ್ಳಿಗಳು ನಿರ್ಮಾಣವಾಗಿರುವುದು ಚಿತ್ರದಲ್ಲಿ ಕಾಣಿಸಿದೆ.

ಅರುಣಾಚಲ ಪ್ರದೇಶದ ಗಡಿಯಲ್ಲಿ ೧೦೦ ಮನೆಗಳನ್ನು ನಿರ್ಮಿಸಿರುವ ಚೀನಾ, ಭೂತಾನ್ ಗಡಿ ಪ್ರಾಂತ್ಯದಲ್ಲಿ ನಾಲ್ಕು ಗ್ರಾಮಗಳನ್ನೇ ನಿರ್ಮಿಸಿರುವುದನ್ನು ಉಪಗ್ರಹ ಚಿತ್ರಗಳು ಸಾಕ್ಷೀಕರಿಸಿವೆ. ಚೀನಾದ ಸೇನೆ ಕಾರ್ಯಚಟುವಟಿಕೆಗಳ ನಡುವೆ ಗಡಿ ಪ್ರದೇಶಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಉಪಗ್ರಹ ಚಿತ್ರಗಳು ಬಿಡುಗಡೆಯಾಗಿದೆ. ಉಪಗ್ರಹ ಚಿತ್ರಗಳ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಭೂತಾನ್ ಪ್ರದೇಶದಲ್ಲಿ ಚೀನಾ ಸೇನೆಯು ನಾಲ್ಕು ಗ್ರಾಮಗಳನ್ನು ನಿರ್ಮಿಸಿದೆ.

ದಿ ಇಂಟೆಲ್ ಲ್ಯಾಬ್‌ನ ಜಾಗತಿಕ ಸಂಶೋಧನಾ ಸಂಸ್ಥೆ ಡಿಟ್ರೆಸ್‌ಫಾ ಉಪಗ್ರಹ ಚಿತ್ರಗಳನ್ನು ಟ್ವೀಟ್ ಮಾಡಿದೆ. ಭೂತಾನ್ ಗಡಿ ಒಳಗೆ ಈ ಹಳ್ಳಿಗಳನ್ನು ೨೦೨೦ರ ಮೇ ತಿಂಗಳಿನಿಂದ ೨೦೨೧ರ ನವೆಂಬರ್ ಅವಧಿಯಲ್ಲಿ ನಿರ್ಮಿಸಲಾಗಿದೆ.

೨೦೧೭ರಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ಸಂಘರ್ಷ ನಡೆದ ಡೋಕ್ಲಾಮ್‌ ಪ್ರಸ್ಥಭೂಮಿ ಸಮೀಪದಲ್ಲಿ ಚೀನಾ ಹಳ್ಳಿ ಸ್ಥಾಪನೆ ಮಾಡುತ್ತಿರುವುದು ಕಳೆದ ವರ್ಷ ವರದಿಯಾಗಿತ್ತು. ಭೂತಾನ್‌ನ ಎರಡು ಕಿಮೀ ಗಡಿಯೊಳಗೆ ಡೋಕ್ಲಾಮ್‌ಗೆ ಬಹಳ ಹತ್ತಿರದಲ್ಲಿ ಈ ಹಳ್ಳಿ ನಿರ್ಮಾಣ ಕಾರ್ಯ ನಡೆದಿರುವುದು ಬಹಿರಂಗವಾಗಿತ್ತು. ಈಗ ಭೂತಾನ್‌ನ ಸುಮಾರು ೧೦೦ ಕಿಮೀ ಚದರ ಕಿಮೀ ವ್ಯಾಪ್ತಿಯಲ್ಲಿ ಅದು ನಾಲ್ಕು ಹಳ್ಳಿಗಳನ್ನು ನಿರ್ಮಿಸಿದೆ ಎನ್ನಲಾಗಿದೆ.

ಉಪಗ್ರಹದ ಚಿತ್ರಗಳಿಂದ ಈ ಗ್ರಾಮವು ೨ ಕಿಲೋಮೀಟರ್ ಭೂತಾನ್ ಪ್ರದೇಶದೊಳಗೆ, ಡೋಕ್ಲಾಮ್‌ಗೆ ಬಹಳ ಹತ್ತಿರದಲ್ಲಿದೆ ಎಂಬುದನ್ನು ತೋರಿಸುತ್ತಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments