ಸದನದಿಂದ ದೂರ ಉಳಿಯಲಿದ್ದಾರಾ ‘ಕೈ’ ಶಾಸಕರು?

0
223

ಬೆಂಗಳೂರು: ಅಧಿವೇಶನಕ್ಕೆ ಗೈರಾಗಿದ್ದ ನಾಲ್ವರು ಕಾಂಗ್ರೆಸ್‌ ಶಾಸಕರು, ಡಿಸಿಎಂ ನೀಡಿದ ಔತಣಕೂಟದಲ್ಲೂ ಕಾಣಿಸಿಕೊಳ್ಳಲಿಲ್ಲ. ಇಂದು ಕೂಡ ‘ಕೈ’ ಅತೃಪ್ತರ ಬಣ ಸದನದಿಂದ ದೂರ ಉಳಿಯೋ ಸಾಧ್ಯತೆಗಳಿವೆ. ಕಾಂಗ್ರೆಸ್‌ ಮುಖಂಡರ ಮನವೊಲಿಕೆಗೆ ಬಗ್ಗದ ರಮೇಶ್ ಜಾರಕಿಹೊಳಿ ತಂಡ, ಹೈಕಮಾಂಡ್‌ಗೆ ಈಗಾಗ್ಲೆ ಸ್ಪಷ್ಟ ಸಂದೇಶವನ್ನು ರವಾನಿಸಿದೆ.

ಸಿಎಲ್‌ಪಿ ಸಭೆ ಕರೆದಿರುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಶಾಸಕರ ಕಡ್ಡಾಯ ಹಾಜರಿಗೆ ಖಡಕ್ ಸೂಚನೆ ನೀಡಿದ್ದಾರೆ. ವಿಪ್‌ ಉಲ್ಲಂಘಿಸಿದ ಶಾಸಕರಿಗೆ ಈಗಾಗ್ಲೆ ಸಿದ್ದರಾಮಯ್ಯ ಅನುಚೇತನಾ ಪತ್ರವನ್ನೂ ರವಾನಿಸಿದ್ದಾರೆ. ಇನ್ನು ಬಜೆಟ್‌ ಮಂಡನೆ ದಿನವೂ ಅತೃಪ್ತ ಶಾಸಕರು ಕಲಾಪಕ್ಕೆ ಗೈರಾದ್ರೆ ಅಂಥವರ ಶಾಸಕತ್ವವನ್ನೇ ಅನರ್ಹಗೊಳಿಸಲು ಕಾಂಗ್ರೆಸ್‌ ಚಿಂತನೆ ನಡೆಸಿದೆ. ಈ ಸಂಬಂಧ ನಾಳೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಯ್ಯ, ಸ್ಪೀಕರ್‌ ರಮೇಶ್‌ ಕುಮಾರ್‌ ಅವರಿಗೆ ಶಿಫಾರಸು ಸಲ್ಲಿಸುವ ಸಾಧ್ಯತೆಗಳೂ ಇವೆ. ರಮೇಶ್ ಜಾರಕಿಹೊಳಿ, ಬಿ.ನಾಗೇಂದ್ರ, ಮಹೇಶ್ ಕಮಟಳ್ಳಿ, ಜಿ.ಎನ್.ಗಣೇಶ್, ಎಸ್‌.ರಾಮಪ್ಪ, ಶ್ರೀನಿವಾಸ್‌ ನಿನ್ನೆ ಅಧಿವೇಶನಕ್ಕೆ ಗೈರಾಗಿದ್ದರು.

LEAVE A REPLY

Please enter your comment!
Please enter your name here