ಡಿಕೆಶಿ ಅವ್ರೇನು ಜೆಡಿಎಸ್​ ಏಜೆಂಟರಾ..? ಶಿವಕುಮಾರ್​ ವಿರುದ್ಧ ಕಾಂಗ್ರೆಸಿಗರಿಂದಲೇ ದೂರು..!

0
228

ಮಂಡ್ಯ: ಡಿ.ಕೆ. ಶಿವಕುಮಾರ್ ಪಕ್ಷದ ಮುಖಂಡರ ಸೂಚನೆಯಂತೆ ಸಭೆ ಕರೆದಿಲ್ಲ. ಜೆಡಿಎಸ್ ವರಿಷ್ಠ ದೇವೇಗೌಡರ ಸೂಚನೆಯಂತೆ ಸಭೆ ಕರೆದಿದ್ದಾರೆ. ಇವರೇನು ಜೆಡಿಎಸ್ ಪಕ್ಷದ ಏಜೆಂಟರೇ ಎಂದು ಮಂಡ್ಯದ ಕಾಂಗ್ರೆಸ್​ ನಾಯಕರು ಆಕ್ರೋಶ ಸಚಿವ ಡಿ. ಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಡಿ. ಕೆ ಶಿವಕುಮಾರ್​ಗೆ ವಿರುದ್ಧ ಮಂಡ್ಯದ ಕಾಂಗ್ರೆಸ್​ ನಾಯಕರು ಸಿಎಲ್​ಪಿ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್​ಗೆ ದೂರು ನೀಡಿದ್ದಾರೆ. ಡಿ. ಕೆ ಶಿವಕುಮಾರ್​ ಮಂಡ್ಯದಲ್ಲಿ ಸಭೆ ಕರೆದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ನಾಯಕರು, ಡಿ.ಕೆ.ಶಿವಕುಮಾರ್ ಮಂಡ್ಯ ಕಾಂಗ್ರೆಸ್ ಮುಖಂಡರ ಸಭೆ ​ ಕರೆದಿದ್ದೇಕೆ ? ನಾವು ಸಭೆಗೆ ಹೋದರೂ ಕಷ್ಟ, ಹೋಗದಿದ್ದರೂ ಕಷ್ಟ. ಡಿಕೆಶಿಗೆ ಸಭೆ ಕರೆಯುವಂತೆ ಸೂಚನೆ ಕೊಟ್ಟಿದ್ರಾ ?  ಅಂತ ಪ್ರಶ್ನಿಸಿದ್ದಾರೆ. ಚೆಲುವರಾಯಸ್ವಾಮಿ, ರಮೇಶ ಬಂಡಿಸಿದ್ದೇಗೌಡ, ನರೇಂದ್ರಸ್ವಾಮಿ, ಚಂದ್ರಶೇಖರ್​ ಸೇರಿದಂತೆ ಮಂಡ್ಯ ನಾಯಕರು ದೂರು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here