ಮಾಜಿ‌ ಸಚಿವ ಎ.ಮಂಜು ಇಂದು ಬಿಜೆಪಿ ಸೇರ್ಪಡೆ ಸಾಧ್ಯತೆ

0
139

ಬೆಂಗಳೂರು: ಹಾಸನದ ಕಾಂಗ್ರೆಸ್​ ನಾಯಕ, ಮಾಜಿ ಸಚಿವ ಎ. ಮಂಜು ಇಂದು ಬೆಂಗಳೂರಿನ ಬಿ. ಎಸ್​. ಯಡಿಯೂರಪ್ಪ ಅವರ ನಿವಾಸದಲ್ಲಿ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ. ಹಾಗೆಯೇ ಮಂಜು ಅವರು ಜಿಲ್ಲಾ ಕಾಂಗ್ರೆಸ್​ ಮುಖಂಡರನ್ನು ಬಿಜೆಪಿಗೆ ಕರೆದೊಯುತ್ತಾರೆ ಎಂಬ ಮಾತುಗಳೂ ಕೇಳಿ ಬರ್ತಿವೆ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತ ದೇವರಾಜ್ ಕೂಡ ಕಾಂಗ್ರೆಸ್​​​ಗೆ ಗುಡ್ ಬೈ ಸಾಧ್ಯತೆ ಇದೆ. ನಿನ್ನೆ ನಡೆದ ಮಂಜು ಅಭಿಮಾನಿಗಳ ಸಭೆಯಲ್ಲಿ ಜಿ.ಪಂ ಅಧ್ಯಕ್ಷೆ ಶ್ವೇತ ಅವರೂ ಭಾಗವಹಿಸಿದ್ದರು. ಕಾಂಗ್ರೆಸ್​​​ನ ಬಹುತೇಕ ಚುನಾಯಿತ ಜನಪ್ರತಿನಿಧಿಗಳು ಕಾಂಗ್ರೆಸ್ ಬಿಡಲು ತಯಾರಿ ನಡೆಸಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿದೆ.

LEAVE A REPLY

Please enter your comment!
Please enter your name here