‘ಕೈ’ ಬಿಟ್ಟು ಬಿಜೆಪಿ ಸೇರ್ತಾರಾ ಎ. ಮಂಜು..?

0
141

ಹಾಸನ: ವಿರೋಧದ ನಡುವೆಯೂ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಎ. ಮಂಜು ಅವರು ಬಿಜೆಪಿ ಸೇರಲು ಮುಂದಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಸಮ್ಮುಖದಲ್ಲಿ‌‌ ಬಿಜೆಪಿ ಸೇರಲು ಹೊರಟಿರೋ ಎ.ಮಂಜು ಅವರಿಗೆ ಬಿಜೆಪಿ ನಾಯಕರೇ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಆದರೆ ಎ. ಮಂಜು ಬಿಜೆಪಿ ಸೇರೋದು ಬಹುತೇಕ ಖಚಿತವಾಗಿದೆ.

ಎ. ಮಂಜು ಎ. ಮಂಜು ಬಿಜೆಪಿ ಸೇರ್ಪಡೆಗೆ ಜಿಲ್ಲಾದ್ಯಕ್ಷ ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯ ನಾಯಕರ ಸಂಪರ್ಕದೊಂದಿಗೆ ಪಕ್ಷ ಸೇರಲು ಎ. ಮಂಜು ಸಿದ್ದತೆಮಾಡಿಕೊಂಡಿದ್ದಾರೆ. ಹಾಸನದಿಂದ ದೋಸ್ತಿ ಅಭ್ಯರ್ಥಿಯಾಗಿ ಪ್ರಜ್ವಲ್​ ರೇವಣ್ಣ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ರೇವಣ್ಣ ಅವರಿಗೆ ಸೆಡ್ಡು ಹೊಡಿಯಲು ಹಾಸನದಿಂದ ಬಿಜೆಪಿ ಅಭ್ಯರ್ಥಿಯಾಗಿ ಎ. ಮಂಜು ಕಣಕ್ಕಿಳಿಯುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here