ಮೋದಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ರಾಜ್ಯ ಕಾಂಗ್ರೆಸ್

0
250

 

ಬೆಂಗಳೂರು : ಟ್ವಿಟರ್ ಮೂಲಕ ರಾಜ್ಯ ಕಾಂಗ್ರೆಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ದ ಕಿಡಿ ಕಾರಿದೆ. ತುಘಲಕ್ ಮೋದಿಯವರೇ ಎಂದು ಹೇಳುವ ಮೂಲಕ ದೇಶದ ಆತ್ಮವಾದ ಸಂವಿಧಾನ, ಪ್ರಜಾಪ್ರಭುತ್ವವನ್ನು ಆಪರೇಷನ್ ಕಮಲ ಕೊಲೆ ಮಾಡ್ತಿದೆ. ಹಣ ಮತ್ತು ಮಂತ್ರಿಗಿರಿಯ ಆಮಿಷ, ಒತ್ತಡ, ಬೆದರಿಕೆ ಮುಖೇನ ಆಪರೇಷನ್ ಕಮಲದ ಸಂಚು ಬಯಲಾಗಿದೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ,  ಆರ್. ಅಶೋಕ್ ಅವರು ಕಾಂಗ್ರೆಸ್ ಶಾಸಕರಾದ ಎಂಟಿಬಿ ನಾಗರಾಜ್ ಅವರನ್ನು ಅಪಹರಿಸಿದ್ದಾರೆ ಎಂದು ಕಿಡಿಕಾರಿದೆ.

LEAVE A REPLY

Please enter your comment!
Please enter your name here