ಬೆಂಗಳೂರು: ನಾಳೆ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನಲೆಯಲ್ಲಿ, ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ದೂರು ದಾಖಲಾಗಿದೆ.
ಬಿಎಂಟಿಸಿ ಎಂಡಿ ಸಿ.ಶಿಕಾ ಗೆ, ಬಿಎಂಟಿಸಿ ನಾಯಕ ತ್ಯಾಗರಾಜ್ ಕೋಡಿಹಳ್ಳಿಚಂದ್ರಶೇಖರ್ ವಿರುದ್ಧ ದೂರು ದಾಖಲಿಸಿದ್ದಾರೆ. ಮುಷ್ಕರ ವೇಳೆಯಲ್ಲಿ ಅಹಿತಕರ ಘಟನೆ ನಡೆದರೆ, ಇದಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಹೊಣೆಯಾಗಲಿದ್ದು, ಬಸ್ ಗಳಿಗೆ ಹಾನಿಯಾದರೆ ಕೋಡಿಹಳ್ಳಿ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ಬಸ್ ಸೇವೆ ಅಗತ್ಯ ಸೇವೆಯಾಗಿದೆ, ಸೇವೆ ನೀಡುವುದು ನಮ್ಮ ಮುಖ್ಯ ಧ್ಯೇಯ ಎನ್ನುವ ವಿಷಯ ದೂರಿನಲ್ಲಿ ಉಲ್ಲೇಖವಾಗಿದೆ.