Tuesday, September 27, 2022
Powertv Logo
Homeಸಿನಿಮಾಸುದೀಪ್ ಅಭಿಮಾನಿಗಳ ವಿರುದ್ಧ ಪೊಲೀಸ್ ಆಯುಕ್ತ ಭಾಸ್ಕರ್ ರಾವ್​ಗೆ ದೂರು!

ಸುದೀಪ್ ಅಭಿಮಾನಿಗಳ ವಿರುದ್ಧ ಪೊಲೀಸ್ ಆಯುಕ್ತ ಭಾಸ್ಕರ್ ರಾವ್​ಗೆ ದೂರು!

ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿಮಾನಿಗಳ ವಿರುದ್ಧ ನಗರದ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಸುದೀಪ್ ಆಭಿಮಾನಿಗಳಿಂದ ಪದೇ ಪದೇ ಬೆದರಿಕೆ  ಕರೆ ಬರುತ್ತಿದೆ  ಎಂದು ವಂದೇ ಮಾತರಂ ಸಮಾಜಸೇವೆ ಸಂಸ್ಥೆಯ ರಾಜ್ಯಾಧ್ಯಕ್ಷ ಶಿವಕುಮಾರ್ ನಾಯ್ಡು, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್​ಗೆ ದೂರು ನೀಡಿದ್ದಾರೆ.

ರಮ್ಮಿ ಆಟ ಜೂಜಿಗೆ ಸಂಬಂಧಿಸಿದ್ದಾಗಿದ್ದು, ಅದರ ಜಾಹೀರಾತಿನಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದರಿಂದ ಅವರ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ಶಿವಕುಮಾರ್ ದೂರು ನೀಡಿದ್ದಾರೆ. ಈ ಜಾಹೀರಾತಿನಲ್ಲಿ ಸುದೀಪ್ ಇರುವುದು ಅವರ ಅಭಿಮಾನಿಗಳಿಗೆ ಜೂಜಾಡಲು ಪ್ರೇರಣೆ ನೀಡಿದಂತಾಗುತ್ತದೆ. ಹಾಗಾಗಿ ಸುದೀಪ್ ಜಾಹೀರಾತಿನಿಂದ ಹೊರಬರಬೇಕು. ಇಲ್ಲವಾದಲ್ಲಿ ಅವರನ್ನು ಚಲನಚಿತ್ರಗಳಿಂದ ನಿಷೇಧಿಸುವಂತೆ ಆದೇಶ ನೀಡಿದ್ದರು.

ಈ ಸಂಬಂಧ ದೂರು ನೀಡಿರುವುದಕ್ಕೆ ವಂದೇ ಮಾತರಂ ಸಮಾಜಸೇವೆ ಸಂಸ್ಥೆಯವರಿಗೆ ಸುದೀಪ್ ಅಭಿಮಾನಿಗಳಿಂದ ಬೆದರಿಕೆ ಕರೆಗಳು ಬರುತ್ತಿದ್ದು, ದೇಶ ವಿದೇಶಗಳಿಂದಲೂ ಕರೆಗಳು, ವಾಟ್ಸಪ್ ಸಂದೇಶಗಳು ಬರುತ್ತಿದೆ. ಬೆದರಿಕೆ ಕರೆಗಳು ಬರುತ್ತಿರುವ ಹಿನ್ನಲೆ ಸಂಸ್ಥೆಯವರು ತಮಗೆ ಏನೇ ಆದರೂ ಅದಕ್ಕೆ ಸುದೀಪ್ ನೇರ ಹೊಣೆಯಾಗುತ್ತಾರೆ ಎಂದು ಆಯುಕ್ತರಿಗೆ ದೂರು ನೀಡಿದ್ದಾರೆ.

 

9 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments