ಬೆಂಗಳೂರು: ತುರ್ತುಪರಿಸ್ಥಿತಿಗಳಲ್ಲಿ ಹೊಯ್ಸಳ ಬಳಸಿಕೊಳ್ಳಿ. ಹೊಯ್ಸಳ ನಿಮ್ಮದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ನಿಮ್ಮ ತುರ್ತು ಪರಿಸ್ಥಿತಿಗೆ ದಯವಿಟ್ಟು ಪೊಲೀಸ್ ಕಾರನ್ನು ಬಳಸಿಕೊಳ್ಳಿ‘ ಎಂದು ಹೇಳಿದ್ದಾರೆ. ಹೊಯ್ಸಳ ಸೇವೆಯನ್ನು ಪಡೆಯಲು 100 ಕ್ಕೆ ಕರೆ ಮಾಡಿ. ನಿಮ್ಮ ಕರೆಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ.
ಇನ್ನು ಶುಕ್ರವಾರ ಒಬ್ಬ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ಟ್ವೀಟ್ ಮಾಡಿದ ವ್ಯಕ್ತಿಗೆ ಭಾಸ್ಕರ್ ರಾವ್ ಸ್ಪಂದಿಸಿ ಹೊಯ್ಸಳವನ್ನು ಕಳುಹಿಸಿ ಕೊಟ್ಟಿದ್ದಾರೆ.
Every call is taken Seriously, please use your Police car. pic.twitter.com/GtcRLXzEx5
— Bhaskar Rao IPS (@deepolice12) April 11, 2020