Friday, October 7, 2022
Powertv Logo
Homeರಾಜ್ಯಕ್ವಾರಂಟೈನ್​ನಿಂದ ಎಸ್ಕೇಪ್ ಆದವರಿಗೆ ಭಾಸ್ಕರ್ ರಾವ್ ವಾರ್ನಿಂಗ್ ..!

ಕ್ವಾರಂಟೈನ್​ನಿಂದ ಎಸ್ಕೇಪ್ ಆದವರಿಗೆ ಭಾಸ್ಕರ್ ರಾವ್ ವಾರ್ನಿಂಗ್ ..!

ಬೆಂಗಳೂರು: ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬರುವವರಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿದೆ. ಆದ್ರೆ ಹಲವಾರು ಜನ ಕ್ವಾರಂಟೈನ್​ಗೆ ಹೆದರಿ ರೈಲ್ವೆ ನಿಲ್ದಾಣದಿಂದ ಎಸ್ಕೇಪ್ ಆಗುತ್ತಿದ್ದಾರೆ ಅಂತವರಿಗೆ ಇಂದು ನಗರ ಕಮಿಷನರ್ ಭಾಸ್ಕರ್ ರಾವ್ ಖಡಕ್ ಎಚ್ಚರಿಗೆ ನೀಡಿದ್ದಾರೆ.

ಕೊರೋನಾ ಸಂಧರ್ಬದಲ್ಲಿ ಅನೇಕ ಕನ್ನಡಿಗರು ಬೇರೆ ಬೇರೆ ರಾಜ್ಯಗಳಲ್ಲಿ ಸಿಲುಕಿ ಕೊಂಡಿದ್ದಾರೆ. ಅಂತವರನ್ನು ರಾಜ್ಯ ಸರ್ಕಾರ ನಮ್ಮ ರಾಜ್ಯಕ್ಕೆ ಕರೆಸಿಕೊಳ್ಳುತ್ತಿದೆ. ಹಾಗೆಯೇ ಮುಂಬೈ ಹೊರತು ಪಡಿಸಿ ಬೇರೆ ರಾಜ್ಯಗಳಿಂದ ಬರುವ ಎಲ್ಲರಿಗೂ ಹೋಂ ಕ್ವಾರಂಟೈನ್ ಕಡ್ಡಾಯವಾಗಿದೆ, ಆದರೆ ಮುಂಬೈನಲ್ಲಿ ಅತೀ ಹೆಚ್ಚು ಪ್ರಕರಣಗಳಿದ್ದು, ಅಲ್ಲಿಂದ ಬಂದ ಅನೇಕರಲ್ಲಿ ಕೊರೋನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನಲೆ ಮುಂಬೈನಿಂದ ಬರುವ ಎಲ್ಲರೂ ಕೂಡ ಹೊಟೇಲ್ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ. ಇಂದೂ ಕೂಡ ವಿಶೇಷ ರೈಲಿನ ಮೂಲಕ ಮುಂಬೈನಿಂದ 1,734 ಜನ ಪ್ರಯಾಣಿಕರನ್ನು ಕರೆತರಲಾಯಿತು. ಆದರೆ ಕೆಲವರು ಕ್ವಾರಂಟೈನ್​ಗೆ ಹೆದರಿ ರೈಲ್ವೆ ನಿಲ್ದಾಣದಿಂದ ಎಸ್ಕೆಪ್ ಆಗಿದ್ದಾರೆ. ಇನ್ನು ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಯಾರಾದರು ಎಸ್ಕೆಪ್ ಆಗಿದ್ದರೆ ತಕ್ಷಣ ಸ್ವಯಂ ಪ್ರೇರಿತರಾಗಿ ಬಂದು ಕ್ವಾರಂಟೈನ್ ಆಗಬೇಕು. ಯಾರೆಲ್ಲ ಪ್ರಯಾಣ ಮಾಡಿದ್ದಾರೆ ಅವರ ಲಿಸ್ಟ್ ನಮ್ಮ ಬಳಿ ಇದೆ. ಯಾರಾದರು ಎಸ್ಕೇಪ್ ಆಗಿದ್ದರೆ ಅವರ ವಿರುದ್ದ NDMA ಆಕ್ಟ್ ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments