Home ರಾಜ್ಯ ನಿಗೂಢ ನಾಪತ್ತೆಯಾಗಿರುವ coffee day ಮಾಲೀಕ ಸಿದ್ದಾರ್ಥ್​ರಿಂದ ಭಾವುಕ ಪತ್ರ

ನಿಗೂಢ ನಾಪತ್ತೆಯಾಗಿರುವ coffee day ಮಾಲೀಕ ಸಿದ್ದಾರ್ಥ್​ರಿಂದ ಭಾವುಕ ಪತ್ರ

ನಿನ್ನೆ ರಾತ್ರಿ ನೇತ್ರಾವತಿ ಸೇತುವೆ ಬಳಿ ಕಾಣೆಯಾಗಿರುವ coffee day ಮಾಲೀಕ ಹಾಗೂ ಮಾಜಿ ಸಿಎಂ ಎಸ್​.ಎಂ ಕೃಷ್ಣರವರ ಅಳಿಯ ಸಿದ್ದಾರ್ಥ್​ ತಮ್ಮ ಸಂಸ್ಥೆಯ ನಿರ್ದೇಶಕರಿಗೆ ಹಾಗೂ coffee Day ಉದ್ಯೋಗಿಗಳಿಗೆ ಭಾವುಕ ಪತ್ರವೊಂದನ್ನು  ಬರೆದಿದ್ಧಾರೆ.

‘’ 37 ವರ್ಷಗಳಿಂದ ಬದ್ಧತೆ, ಶ್ರಮದಿಂದ ಸಂಸ್ಥೆ ಕಟ್ಟಿದ್ದೇನೆ. 30 ಸಾವಿರ ಉದ್ಯೋಗಗಳನ್ನು ಸೃಷ್ಟಿ ಮಾಡಿದ್ದೇನೆ.  ಐಟಿಯಲ್ಲಿ 20 ಸಾವಿರ ಉದ್ಯೋಗ ಸೃಷ್ಟಿಸಿದ್ದೇನೆ. ಆದ್ರೆ, ನಾನು ಲಾಭದಾಯಕ ಉದ್ಯಮ ಮಾಡುವಲ್ಲಿ ವಿಫಲನಾದೆ. ನನ್ನ ಪರಿಶ್ರಮದ ನಂತರವೂ ಯಾವುದೇ ಪ್ರಯೋಜನವಾಗಲಿಲ್ಲ.
ಲಾಭದಾಯಕ ಉದ್ಯಮದಲ್ಲಿ ಯಶಸ್ವಿ ಆಗಲಿಲ್ಲ. ಈಗ ಎಲ್ಲವನ್ನೂ ಕೈಚೆಲ್ಲುವ ನಿರ್ಧಾರ ಮಾಡಿದ್ದೇನೆ.
ನನ್ನ ಮೇಲೆ ವಿಶ್ವಾಸ ಇಟ್ಟವರ ನಂಬಿಕೆ ಉಳಿಸಿಕೊಳ್ಳುತ್ತಿಲ್ಲ. ಸಾಕಷ್ಟು ಹೋರಾಟದ ನಂತರ ನಾನು ಕೈ ಚೆಲ್ಲುತ್ತಿದ್ದೇನೆ.

ನನ್ನ ಷೇರುಗಳನ್ನು ಹಿಂಪಡೆಯಲು ನನಗೆ ಒತ್ತಡ ಇದೆ. ಹೆಚ್ಚಿನ ಒತ್ತಡ ನನ್ನಿಂದ ತೆಗೆದುಕೊಳ್ಳಲು ಆಗುತ್ತಿಲ್ಲ. 6 ತಿಂಗಳ ಹಿಂದಷ್ಟೆ ಅಧಿಕ ಪ್ರಮಾಣದ ಸಾಲ ಪಡೆದಿದ್ದೇನೆ. ಪರಿಸ್ಥಿತಿ ನಿಭಾಯಿಸಲು ನನ್ನ  ಮೇಲೆ ಅಧಿಕ ಒತ್ತಡ ಇದೆ. ಹಿಂದಿನ ಐಟಿ ಡಿಜಿಯಿಂದ ಕಾಫಿ ಡೇ, ಮೈಂಡ್‌ಟ್ರೀ ಸಂಸ್ಥೆ ಷೇರುಗಳ ವಿಚಾರವಾಗಿಯೂ ತುಂಬಾ ಕಿರುಕುಳವಾಗುತ್ತಿದೆ. ಒತ್ತಡಗಳ ನಡುವೆಯೂ ನಾನು ಐಟಿ ಫೈಲ್ ಮಾಡಿದ್ದೇನೆ. ಇದು ನನಗೆ ಆರ್ಥಿಕವಾಗಿ ಬಹಳ ನಷ್ಟ ಉಂಟು ಮಾಡಿದೆ.

ಈ ಉದ್ಯಮವನ್ನ ಮುಂದುವರೆಸಿಕೊಂಡು ಹೋಗಿ, ನೀವೆಲ್ಲಾ ಹೊಸ ಆಡಳಿತ ಮಂಡಳಿಗೆ ಸಹಕರಿಸಿ.
ನನ್ನ ಎಲ್ಲಾ ತಪ್ಪು ನಿರ್ಧಾರಗಳಿಗೆ ನಾನೇ ನೇರ ಕಾರಣ. ಎಲ್ಲಾ ಹಣಕಾಸು ವಹಿವಾಟುಗಳಿಗೆ ನಾನೇ ಹೊಣೆ. ನನ್ನ ವ್ಯವಹಾರದ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ನನ್ನ ತಂಡ, ಆಡಿಟರ್ ಹಾಗೂ ಹಿರಿಯ ಸದಸ್ಯರಿಗೂ ಕೂಡ ಈ ಬಗ್ಗೆ ಮಾಹಿತಿ ಇಲ್ಲ.ಕಾನೂನು ನನ್ನನ್ನು ಮಾತ್ರ ಜವಾಬ್ದಾರನನ್ನಾಗಿ ಮಾಡಬೇಕು. ನಾನು ಈ ಮಾಹಿತಿಯನ್ನು ಕುಟುಂಬ ಸದಸ್ಯರಿಂದಲೂ ಗೌಪ್ಯವಾಗಿಟ್ಟಿದ್ದೇನೆ. ಯಾರಿಗೂ ಮೋಸ ಮಾಡುವ ಉದ್ದೇಶ ನನ್ನದಾಗಿರಲಿಲ್ಲ.
ಒಬ್ಬ ಉದ್ಯಮಿಯಾಗಿ ನಾನು ವಿಫಲನಾಗಿದ್ದೇನೆ. ಎಲ್ಲರಿಗೂ ಇದು ನನ್ನ ಕಳಕಳಿಯ ಮನವಿ.
ಮುಂದೆ ನನ್ನನ್ನು ಅರ್ಥ ಮಾಡಿಕೊಂಡು ಕ್ಷಮಿಸುತ್ತೀರಾ ಎಂದು ಭಾವಿಸುತ್ತೇನೆ

ನನ್ನ ಆಸ್ತಿ, ಆಸ್ತಿಯ ಮೌಲ್ಯವನ್ನು ಪಟ್ಟಿ ಮಾಡಿ ಇಟ್ಟಿದ್ದೇನೆ. ನನ್ನ ಆಸ್ತಿಯಿಂದ ಪ್ರತಿಯೊಬ್ಬರಿಗೂ ಹಣ ಪಾವತಿಸಿದ್ದೇನೆ. ಈ ಮೂಲಕ ಆರ್ಥಿಕ ಒತ್ತಡದ ವಿರುದ್ಧ ಹೋರಾಟ ಮಾಡಿ ಕೈಚೆಲ್ಲಿದ್ದೇನೆ’’  ಎಂದು ಎರಡು ದಿನಗಳ ಹಿಂದೆಯೇ ಸಿದ್ದಾರ್ಥ್​ರವರು  ಪತ್ರ ಬರೆದಿದ್ಧಾರೆ. ಈ ಪತ್ರ ಈಗ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

LEAVE A REPLY

Please enter your comment!
Please enter your name here

- Advertisment -

Most Popular

ಆಧುನಿಕ ಭಗೀರಥ ಕಾಮೇಗೌಡರಿಗೆ ಅನಾರೋಗ್ಯ; ದಿಢೀರ್ ಆಸ್ಪತ್ರೆಗೆ ದಾಖಲು.

ಮಂಡ್ಯ: ಮಂಡ್ಯದ ಕೆರೆ ಕಾಮೇಗೌಡರು ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ನಲ್ಲಿ ಪ್ರಶಂಸೆಗೆ ಒಳಪಟ್ಟ ಕೆರೆ ಕಾಮೇಗೌಡರು ದೇಶ ಮಾತ್ರವಲ್ಲ, ವಿಶ್ವದ ಹಲವೆಡೆ...

ಮಳೆ ಮಧ್ಯೆಯೂ ಕರ್ತವ್ಯ ನಿಷ್ಠೆ : ಎಸ್​.ಪಿ ಮೆಚ್ಚುಗೆ

ಬಾಗಲಕೋಟೆ: ಜಿಲ್ಲೆಯ ಕಲಾದಗಿಯಲ್ಲಿ ಗ್ರಾಮದಲ್ಲಿ ಸೋಂಕಿತರು ಹೆಚ್ಚಿದ ಪರಿಣಾಮ ಗ್ರಾಮ ಸೀಲ್ ಡೌನ್ ಮಾಡಲಾಗಿದೆ.ಮಳೆ ಮಧ್ಯೆಯೂ ಪೋಲಿಸ ಪೇದೆ ಕತ೯ವ್ಯ ನಿಷ್ಠೆ ಮೆರದ ವಿಡಿಯೋ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.ಸೀಲ್ ಡೌನ್ ಆಗಿರೋ...

ಗಮನ ಸೆಳೆದ ‘ಮಾಸ್ಕ್ ಪರಾಟಾ..!’

ಕರೋನಾದಿಂದ ಬಚಾವಾಗಲು ಇರುವ ಬಹು ಮುಖ್ಯ ಅಸ್ತ್ರ ಎಂದರೆ ಅದು ಫೇಸ್ ಮಾಸ್ಕ್. ಎಲ್ಲರೂ ಫೇಸ್ ಮಾಸ್ಕ್ ಬಳಸಿ ಎಂದು ಸರ್ಕಾರ ಸೇರಿದಂತೆ, ಸಾಕಷ್ಟು ಮಂದಿ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಇಲ್ಲೊಂದು ಹೊಟೆಲ್...

ಚಾರ್ಮಾಡಿ ಘಾಟ್​​ನಲ್ಲಿ ರಾತ್ರಿ ಸಂಚಾರಕ್ಕೆ ನಿರ್ಬಂಧ

ಚಿಕ್ಕಮಗಳೂರು : ಮಂಗಳೂರು-ಚಿಕ್ಕಮಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ನಲ್ಲಿ ಭಾರೀ ಮಳೆಯಿಂದಾಗಿ ಮಣ್ಣು ಕುಸಿಯುವ ಭೀತಿ ಎದುರಾಗಿದ್ದು ಇದನ್ನು ತಪ್ಪಿಸಲು ಘಾಟ್ ನಲ್ಲಿ ಸಂಜೆ 7 ಗಂಟೆಯಿಂದ ಬೆಳಗ್ಗೆ 7...

Recent Comments