ಕಾವೇರಿ ಹೋರಾಟದ ಸಂದರ್ಭ ರೈತರ ಮೇಲಾದ ಕೇಸ್ ವಾಪಸ್..!

0
258

ಬೆಂಗಳೂರು: ಮೈತ್ರಿ ಸರ್ಕಾರ ಕಾವೇರಿ ಹೋರಾಟಗಾರರಿಗೆ ಗುಡ್ ನ್ಯೂಸ್ ನೀಡಿದೆ. ಕಾವೇರಿ ಹೋರಾಟದ ಸಂದರ್ಭ ಹೋರಾಟಗಾರರ ವಿರುದ್ಧ ದಾಖಲಾಗಿರುವ ಶೇ 95ರಷ್ಟು ಕೇಸುಗಳನ್ನು ವಾಪಸ್​ ತೆಗೆದುಕೊಳ್ಳಲಾಗುತ್ತೆ ಅಂತ ಹೇಳಿರೋ ದೋಸ್ತಿ ಸರ್ಕಾರ ಅನ್ನದಾತರಿಗೆ ಸಿಹಿ ಸುದ್ದಿ ನೀಡಿದೆ. ಈ ಕುರಿತು ಮಂಡ್ಯದ ಮದ್ದೂರಿನಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಕ್ಯಾಬಿನೆಟ್ ಉಪ ಸಮಿತಿ ಸಭೆಯಲ್ಲಿ ನಿರ್ಧಾರ ಮಾಡಲಾಗಿದ್ದು, ರೈತರ ಮೇಲಿನ ಶೇ.95ರಷ್ಟು ಕೇಸುಗಳನ್ನು ಕೈಬಿಡಲು ಸರ್ಕಾರ ತೀರ್ಮಾನ ಮಾಡಿದೆ. ಫೆ.27ರಂದು ಸಿಎಂ ಕುಮಾರಸ್ವಾಮಿ ಮಂಡ್ಯಕ್ಕೆ ಆಗಮಿಸಲಿದ್ದು ಕೇಸು ಹಿಂಪಡೆಯುವ ನಿರ್ಧಾರವನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

ಕಾವೇರಿ ಹೋರಾಟದ ಸಂದರ್ಭ ರೈತ ಹೋರಾಟಗಾರರ ಮೇಲೆ ಕೇಸುಗಳನ್ನು ದಾಖಲಿಸಲಾಗಿತ್ತು. ಇದೀಗ ರೈತರ ಪರವಾಗಿ, ಕಾವೇರಿ ಹೋರಾಟಗಾರರ ಪರವಾಗಿ ಪ್ರಮುಖ ನಿರ್ಧಾರ ತೆಗೆದುಕೊಂಡಿರುವ ಸರ್ಕಾರ ಕೇಸು ಹಿಂಪಡೆಯುವುದಾಗಿ ಹೇಳಿದೆ.

LEAVE A REPLY

Please enter your comment!
Please enter your name here