ಬೆಂಗಳೂರು: ನಾಳೆ ನಾಡಿದ್ದು ಸಿಎಂ ಬಿಎಸ್ ಯಡಿಯೂರಪ್ಪ ಉಡುಪಿ ಪ್ರವಾಸ ಮಾಡಲಿದ್ದಾರೆ. ನಾಳೆ ಸಂಜೆ ಮಧ್ಯಾಹ್ನ 3 ಗಂಟೆಗೆ ಹೆಚ್ ಎ ಎಲ್ ನಿಂದ ಪ್ರಯಾಣ ಬೆಳೆಸಿ, ಸಂಜೆ 5 ಗಂಟೆಗೆ ಪರ್ಯಾಯ ಪಂಚ ಶತಮಾನೋತ್ಸವದಲ್ಲಿ ಭಾಗಿಯಾಗಲಿದ್ದಾರೆ.
ನಾಳೆ ಸಂಜೆ 6.30ಕ್ಕೆ ಕರಂಬಳ್ಳಿ ವೆಂಕಟರಮಣ ಬ್ರಹ್ಮ ಕಲಶೋತ್ಸವದಲ್ಲಿ ಭಾಗವಹಿಸಿ, ನಾಳೆ ಉಡುಪಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮಂಗಳವಾರ ಬೆಳಗ್ಗೆ 9ಕ್ಕೆ ಉಚ್ಚಿಲದಲ್ಲಿನ ಮಹಾಲಕ್ಷ್ಮಿ ಸನ್ನಿಧಿಗೆ ಭೇಟಿ ನೀಡಲಿದ್ದಾರೆ. 9.45ಕ್ಕೆ ಹೆಜಮಾಡಿಯಲ್ಲಿ ಮೀನುಗಾರಿಕೆ ಬಂದರು ಶಂಕು ಸ್ಥಾಪನೆ ಮಾಡಿ, 11.40ಕ್ಕೆ ಆನೆಗುಡ್ಡದಲ್ಲಿ ವಿನಾಯಕ ಸನ್ನಿಧಿಗೆ ಭೇಟಿ ನೀಡಿ, ಮಂಗಳವಾರ 3 ಗಂಟೆಗೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.