ಮಂಡ್ಯ: ಅನುದಾನ ಕೇಳಲು ಹೋದ್ರೆ ಸಿಎಂ ಬಿ.ಎಸ್.ಯಡಿಯೂರಪ್ಪ ಫಟ್ ಅಂತಾ ಫೈಲ್ ಬಿಸಾಕ್ತಾರ? ಅನುದಾನ ಬೇಕು ಅಂದ್ರೆ ಸಿಎಂಗೆ ಬೆಣ್ಣೆ ಹೊಡೀಬೇಕು. ಸಿಎಂ ಜೊತೆ ಸಂಪುಟ ಸಹೋದ್ಯೋಗಿ ಆಗಿರೋ ಸಚಿವರೊಬ್ಬರು ನೀಡಿರೋ ಈ ರೀತಿಯ ಹೇಳಿಕೆ ಇದೀಗ ಫುಲ್ ವೈರಲ್ ಆಗಿದೆ.
ಹೌದು, ಈ ರೀತಿ ಹೇಳಿಕೆ ನೀಡಿರೋದು ಬೇರೆ ಯಾರೂ ಅಲ್ಲ, ಸ್ವತಃ ಸಿಎಂ ಯಡಿಯೂರಪ್ಪ ಅವರ ಸಂಪುಟದಲ್ಲಿ ಸಹೋದ್ಯೋಗಿಯಾಗಿರೋ ಹಾಗೂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣಕರ್ತರಲ್ಲಿ ಒಬ್ಬರಾದ ಸಚಿವ ಕೆ.ಸಿ.ನಾರಾಯಣಗೌಡ.
ಸಚಿವ ಕೆ.ಸಿ.ನಾರಾಯಣಗೌಡ ಅವರಿಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಜೊತೆಗೆ ತೋಟಗಾರಿಕೆ, ರೇಷ್ಮೆ, ಪೌರಾಡಳಿತ ಖಾತೆಗಳನ್ನ ನೀಡಲಾಗಿದೆ.
ಸ್ವತಃ ರೇಷ್ಮೆ ಸಚಿವರಾಗಿರೋ ಕೆ.ಸಿ.ನಾರಾಯಣಗೌಡ್ರು ಇತ್ತೀಚೆಗೆ ತಮ್ಮ ಕೆ.ಆರ್ ಪೇಟೆ ನಿವಾಸದಲ್ಲಿ ಆಡಿರೋ ಮಾತುಗಳಿವು.
ಕೆ.ಆರ್.ಪೇಟೆ ತಾಲೂಕು ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷರಾಗಿ ಅಧ್ಯಕ್ಷರಾಗಿ ಸಾರಂಗಿ ನಾಗರಾಜು ಆಯ್ಕೆಯಾಗಿದ್ರು.
ಅವರ ಅಭಿನಂದನೆ ವೇಳೆ, ರೇಷ್ಮೆ ಬೆಳೆಗಾರರು, ತಮ್ಮ ಸಮಸ್ಯೆಯನ್ನ ಸಚಿವರ ಗಮನಕ್ಕೆ ತಂದಿದ್ದಾರೆ.
ಈ ವೇಳೆ ಮಾತನಾಡಿದ ಸಚಿವ ನಾರಾಯಣಗೌಡ, ತೋಟಗಾರಿಕೆ, ಪೌರಾಡಳಿತ ಇಲಾಖೆಯಲ್ಲಿ ಸಮಸ್ಯೆ ಇಲ್ಲ. ಬಟ್ಟೆ ನೇಯ್ಗೆ ಇನ್ನೂ ಸ್ಟಾರ್ಟ್ ಆಗಿಲ್ಲ. 600 ರೂ. ಇದ್ದ ರೇಷ್ಮೆ ಬೆಲೆ 200, 250ಕ್ಕೆ ಬಂದಿದೆ. ಪಾಪ ಅವರಿಗೆ ಬದುಕೋಕೆ ಆಗ್ತಿಲ್ಲ. ಮುಖ್ಯಮಂತ್ರಿಗಳತ್ರ ಅದನ್ನ ಸಾಲ್ವ್ ಮಾಡಿಸಬೇಕು. ಮೂರ್ನಾಲ್ಕು ದಿನದಲ್ಲಿ ಸೆಟಲ್ ಮಾಡಿಸಬೇಕು. ಸಿಎಂ ಹತ್ತಿರ ಫಂಡ್ ತಕೊಂಡ್ ರೈತರಿಗೆ ಸ್ವಲ್ಪ ದುಡ್ಡು ಕೊಡಬೇಕು ಅಂತಿದ್ದೀನಿ. ಪ್ರತಿ ಕೆಜಿಗೆ 100 ಅಥವಾ 50 ರೂ. ಆದರೂ ಎಕ್ಸ್ಟ್ರಾ ಕೊಡಬೇಕು. ಅದಕ್ಕೆಲ್ಲ 600 ಕೋಟಿ ಬೇಕು. 600 ಕೋಟಿ ಅಂದ ತಕ್ಷಣ ಫೈಲ್ ಎಸೆದು ಬಿಡ್ತಾರೆ ಮುಖ್ಯಮಂತ್ರಿಗಳು. ಅನುದಾನಕ್ಕಾಗಿ ಏನ್ ಏನೋ ಬೆಣ್ಣೆ ಹೊಡೆದು ಇದು ಮಾಡ್ಬೇಕು. ಒಂದೊಂದು ಪಾರ್ಟ್ ಪಾರ್ಟ್ ಕೊಡಿ ಅಂತಾ ಕೇಳಬೇಕು ಅನ್ನೋ ವಿಡಿಯೋ ವೈರಲ್ ಆಗಿದೆ.
ಇದೆಲ್ಲವನ್ನೂ ನೋಡಿದ್ರೆ, ಸರ್ಕಾರ ರಚನೆಗೆ, ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಕಾರಣರಾದ ಸಚಿವರೇ ಅನುದಾನಕ್ಕಾಗಿ ಸಿಎಂ ಬಳಿ ಬೇಡಬೇಕ ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಅನುದಾನ ಕೇಳಿದ್ರೆ ಸಿಎಂ ಫೈಲ್ ಬಿಸಾಕ್ತಾರ?
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on
ಕೊರೊನ ನಡುವೆಯೇ ನಾಳೆಯಿಂದ ರಾಜ್ಯಾದ್ಯಂತ ಕೆ-ಸಿಇಟಿ ಪರೀಕ್ಷೆ , ಕೊರೊನ ಪಾಸಿಟಿವ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು
on