Tuesday, September 27, 2022
Powertv Logo
Homeರಾಜ್ಯರಾಜ್ಯದ ಎಲ್ಲಾ ಮಾಧ್ಯಮ ಸಿಬ್ಬಂದಿಗೂ ಕೊರೋನಾ ತಪಾಸಣೆ : ಬಿ.ಎಸ್ ಯಡಿಯೂರಪ್ಪ

ರಾಜ್ಯದ ಎಲ್ಲಾ ಮಾಧ್ಯಮ ಸಿಬ್ಬಂದಿಗೂ ಕೊರೋನಾ ತಪಾಸಣೆ : ಬಿ.ಎಸ್ ಯಡಿಯೂರಪ್ಪ

ಬೆಂಗಳೂರು: ಮಹಾಮಾರಿ ಕೊರೋನಾ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಇದೀಗ ಮಾಧ್ಯಮದವರಿಗೂ ಕೊರೋನಾ ಕಾಟ ಶುರುವಾಗಿದೆ. ಸೋಮವಾರ ಮುಂಬೈನ 53 ಪತ್ರಕರ್ತರಲ್ಲಿ ಕೋವಿಡ್-19 ದೃಢಪಟ್ಟಿದೆ. ಮುಂಬೈನಲ್ಲಿ ಕಂಡುಬಂದ ಪ್ರಕರಣದ ಬಳಿಕ  ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ರಾಜ್ಯದ ಎಲ್ಲಾ ಮಾಧ್ಯಮ ಸಿಬ್ಬಂದಿಯನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲು ಮುಂದಾಗಿದೆ.

ಪ್ರತಿದಿನ ಕೊರೋನಾ ಮಾಹಿತಿ ಕಲೆ ಹಾಕಲು ವರದಿಗಾಗಿ ಹೋಗುವ ಮಾಧ್ಯಮ ಪ್ರತಿನಿಧಿಗಳು ಎಚ್ಚರಿಕೆವಹಿಸುವುದು ಅಗತ್ಯವಾಗಿದೆ. ಇನ್ನು ಮುಂಬೈನಲ್ಲಿ ಪತ್ರಕರ್ತರಲ್ಲಿ ಕೋವಿಡ್-19 ಪತ್ತೆಯಾಗಿರುವುದರಿಂದ ಉನ್ನತ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರಿಗೆ ಪತ್ರ ಬರೆದಿದ್ದಾರೆ. ಮಹಾರಾಷ್ಟ್ರದಲ್ಲಿ ಪತ್ರಕರ್ತರಿಗಾಗಿ ಆಯೋಜಿಸಲಾಗಿದ್ದ ವಿಶೇಷ ಕೋವಿಡ್ -19 ತಪಾಸಣಾ ಶಿಬಿರದಲ್ಲಿ 177 ಜನರಲ್ಲಿ 53 ಜನ ಪತ್ರಕರ್ತರಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಹಾಗಾಗಿ ರಾಜ್ಯದಲ್ಲಿಯೂ ಪತ್ರಕರ್ತರ ತಪಾಸಣೆಗೆ  ಒಳಪಡಿಸಲು ವಾರ್ತಾ ಪ್ರಸಾರ ಇಲಾಖೆಗೆ ಆದೇಶಿಸುವಂತೆ ಸಿಎಂಗೆ  ಮನವಿ ಮಾಡಿಕೊಂಡಿದ್ದಾರೆ.

ಸುರೇಶ್ ಕುಮಾರ್ ಮನವಿಗೆ ಸ್ಪಂದಿಸಿದ  ಯಡಿಯೂರಪ್ಪ ರಾಜ್ಯದ ಎಲ್ಲಾ ಮಾಧ್ಯಮ ಸಿಬ್ಬಂದಿಯನ್ನು ಕೋವಿಡ್ -19 ತಪಾಸಣೆಗೆ ಒಳಪಡಿಸವಂತೆ ವಾರ್ತಾ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

 

 

LEAVE A REPLY

Please enter your comment!
Please enter your name here

- Advertisment -

Most Popular

Recent Comments