ಬಜೆಟ್​​ನಲ್ಲಿ ಬಿಜೆಪಿ ಕಿರಿಕ್​ ತಡೆಯಲು ಸಿಎಂ ಹೊಸ ಸ್ಕೆಚ್​..!

0
164

ಬೆಂಗಳೂರು: ಇದರ ನಡುವೆ ಎರಡು ದಿನಗಳ ಅಧಿವೇಶನ ರಾಜಕೀಯ ಹೈಡ್ರಾಮಾಗೆ ಬಲಿಯಾಗಿದ್ದು, ಇಂದು ಬಜೆಟ್‌ ಮಂಡನೆ ಆಗುತ್ತೋ ಇಲ್ವೋ ಅನ್ನೋದೇ ಅನುಮಾನ ಅನ್ನೋ ಮಾತುಗಳೂ ಕೇಳಿ ಬರ್ತಿವೆ. ಈ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಹೊಸ ಸ್ಕೆಚ್‌ ಹಾಕಿಕೊಂಡಿದ್ದಾರೆ. ಸಂಪೂರ್ಣ ಬಜೆಟ್‌ ಮಂಡನೆಗೂ ಮುನ್ನ ಬಜೆಟ್‌ ಪ್ರತಿ ಹಂಚದಿರಲು ಸಿಎಂ ತೀರ್ಮಾನಿಸಿದ್ದಾರೆ. ಮುಖ್ಯಮಂತ್ರಿಗಳ ಈ ತೀರ್ಮಾನಕ್ಕೇನು ಕಾರಣ ಅಂದ್ರೆ, ಬಜೆಟ್‌ನ ಬಗ್ಗೆ ಆರಂಭದಲ್ಲೇ ಬಿಜೆಪಿ ಕ್ಯಾತೆ ಆರಂಭಿಸಿದೆ. ಅಧಿವೇಶನಕ್ಕೂ ಅಡ್ಡಿಪಡಿಸಿದೆ. ಹಾಗಾಗಿ ವಿರೋಧ ಪಕ್ಷದ ನಾಯಕರಿಂದ ಟೀಕೆ, ಟಿಪ್ಪಣಿ ಬರುವ ಸಾಧ್ಯತೆ ಇದ್ದು ಬಜೆಟ್‌ ಮಂಡನೆಗೂ ಮುನ್ನವೇ ಕೇಸರಿಪಡೆ ವಿರೋಧಿಸಬಹುದು, ಬಜೆಟ್‌ ಪ್ರತಿ ಹರಿದು ರಾದ್ಧಾಂತ ಸೃಷ್ಠಿಸುವ ಸಂಭವ ನಡೆಯಬಹುದು ಎಂದು ಸಿಎಂ ಅವರು ಮುಂಜಾಗೃತೆ ತೆಗೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here