ಕಣ್ಮರೆಯಾದ ಭಾರತೀಯರು ಬೇಗ ಮರಳುವಂತಾಗಲಿ: ದೇವೇಗೌಡ

0
237

ಬೆಂಗಳೂರು: ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಹಾಗೂ ಜೆಡಿಎಸ್​ ಮುಖಂಡರು ನಾಪತ್ತೆಯಾಗಿರುವ ಬಗ್ಗೆ ಮಾಜಿ ಪ್ರಧಾನಿ ಹೆಚ್​​.ಡಿ ದೇವೇಗೌಡ ಅವರು ಪ್ರತಿಕ್ರಿಯಿಸಿದ್ದಾರೆ. ಘಟನೆ ಖಂಡಿಸಿ ಜೆಡಿಎಸ್​ ವರಿಷ್ಠ ದೇವೇಗೌಡರು ಟ್ವೀಟ್​ ಮಾಡಿದ್ದು, ಮೃತ ಹನುಮಂತರಾಯಪ್ಪ, ರಂಗಪ್ಪ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಹಾಗೆಯೇ ಕಣ್ಮರೆ ಆಗಿರುವ ಎಲ್ಲರೂ ಬೇಗ ಮರಳುವಂತಾಗಲಿ ಎಂದು ಬರೆದಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಹೆಚ್​. ಡಿ. ಕುಮಾರಸ್ವಾಮಿ ಅವರು, “ಕೊಲಂಬೋದಲ್ಲಿ ಜೆಡಿಎಸ್​ ಕಾರ್ಯಕರ್ತರ ನಾಪತ್ತೆ ಆಘಾತ ತಂದಿದೆ. ಇಬ್ಬರು ಸಾವನ್ನಪ್ಪಿದ್ದು ತೀವ್ರ ನೋವು ತಂದಿದೆ. ನಾಪತ್ತೆ ಆದವರ ಸಂಪರ್ಕಕ್ಕಾಗಿ ಸತತ ಪ್ರಯತ್ನ ಮಾಡುತ್ತಿದ್ದೇನೆ. ರಾಯಭಾರಿ ಕಚೇರಿಯ ಜೊತೆಗೂ ಸಂಪರ್ಕದಲ್ಲಿ ಇರುವುದಾಗಿ” ಟ್ವೀಟ್ ಮಾಡಿದ್ದಾರೆ.

ಕೊಲಂಬೊದಲ್ಲಿ ಪ್ರವಾಸದಲ್ಲಿದ್ದ ರಾಜ್ಯದ ಏಳು ಮಂದಿ ಜೆಡಿಎಸ್​ ಮುಖಂಡರ ತಂಡ ಬಾಂಬ್ ಸ್ಫೋಟದ ನಂತರ ಕಾಣೆಯಾಗಿದ್ದಾರೆ. ಇದನ್ನು ಕೇಳಿ ನನಗೆ ಇನ್ನಿಲ್ಲದ ಆಘಾತ ಹಾಗೂ ನೋವಾಗಿದೆ. ಈ ಪೈಕಿ ಇಬ್ಬರು ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಕಳೆದು ಹೋಗಿರುವವರನ್ನು ಪತ್ತೆ ಹಚ್ಚಲು ನಾನು ಭಾರತ ರಾಯಭಾರಿ ಕಚೇರಿಯೊಂದಿಗೆ ಸತತ ಸಂಪರ್ಕದಲ್ಲಿದ್ದೇನೆ” ಎಂದು ಬರೆದಿದ್ದಾರೆ.

LEAVE A REPLY

Please enter your comment!
Please enter your name here