ಬೆಂಗಳೂರು: ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿರುವ ಮುಸ್ಲಿಂ ಸಮುದಾಯದ ನಾಯಕ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಸಿಎಂ ಇಬ್ರಾಹಿಂ ಅಧಿಕಾರ ಸ್ವೀಕರಿಸಿದರು.
ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿರುವ ಮುಸ್ಲಿಂ ಸಮುದಾಯದ ನಾಯಕ ಜೆಡಿಎಸ್ಗೆ ಸಿಗಲಿದ್ಯಾ ಅಲ್ಪಸಂಖ್ಯಾತ ಸಮುದಾಯದ ಪೂರ್ಣ ಬೆಂಬಲ? ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಕ್ಕೆ ಬಲ ತಂದುಕೊಡಲಿದ್ದಾರಾ ಇಬ್ರಾಹಿಂ? ಎಂದು ಕಾದುನೋಡಬೇಕು. ಕಾರ್ಯಕ್ರಮದಲ್ಲಿ ಹೆಚ್. ಡಿ.ದೇವೇಗೌಡರು, ಹೆಚ್ ಡಿಕೆ, ಸೇರಿದಂತೆ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಜೆಡಿಎಸ್ ರಾಷ್ಟ್ರೀಯ ಸಂಸದೀಯ ಮಂಡಳಿ ಅಧ್ಯಕ್ಷರಾಗಿ ಹೆಚ್.ಕೆ. ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿದ್ದು, ರಾಜ್ಯಾಧ್ಯಕ್ಷ ಸ್ಥಾನವನ್ನು ಇಬ್ರಾಹಿಂಗೆ ನೀಡಿ ಅಧ್ಯಕ್ಷರಾಗಿ ಹೆಚ್.ಕೆ. ಕುಮಾರಸ್ವಾಮಿ ಹೊಸ ಪಟ್ಟ ಸ್ವೀಕರಿಸಿದ್ದಾರೆ.