ಕಾಡ್ಗಿಚ್ಚು ನಂದಿಸಲು ಹೆಲಿಕಾಪ್ಟರ್​ ಬಳಕೆ

0
380

ಬಂಡೀಪುರ: ಅಭಯಾರಣ್ಯದಲ್ಲಿ ಕಾಡ್ಗಿಚ್ಚು ನಂದಿಸಲು ಸಿಎಂ ಸೂಚನೆ ಮೇರೆಗೆ ಹೆಲಿಕಾಪ್ಟರ್ ಬಳಕೆ ಮಾಡಲಾಗಿದೆ. ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ತರಿಸಿಕೊಂಡ ಸಿಎಂ ಎಚ್​. ಡಿ ಕುಮಾರಸ್ವಾಮಿ ಅವರು ಬೆಂಕಿ ನಂದಿಸಲು ಹೆಲಿಕಾಪ್ಟರ್ ಬಳಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ಧಾರೆ.

ಅರಣ್ಯ ಸಚಿವ ಸತೀಶ್​ ಜಾರಕಿಹೊಳಿ ಅವರು ಸ್ವಂತ ಹೆಲಿಕಾಪ್ಟರ್​ನಲ್ಲಿ ತೆರಳಿ ವೈಮಾನಿಕ ಸಮೀಕ್ಷೆನಡೆಸಿದ್ಧಾರೆ. ಕಾಡ್ಗಿಚ್ಚಿನ ಗಂಭೀರತೆಯನ್ನು ತಿಳಿಯಲು ಸಚಿವರು ಹೆಲಿಕಾಪ್ಟರ್​ ಮೂಲಕ ಸಮೀಕ್ಷೆ ನಡೆಸಿದ್ದಾರೆ.

ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚಿನ ರೌದ್ರ ನರ್ತನ ಮುಂದುವರೆದಿದ್ದು ಸತತ ಒಂದು ವಾರದಿಂದ  ಹಸಿರು ಕಾಡು ಹೊತ್ತಿ ಉರಿಯುತ್ತಿದೆ. ಕಾಡ್ಗಿಚ್ಚಿನಿಂದ ವನ್ಯ ಮೃಗಗಳು ಸುಟ್ಟು ಕರಕಲಾಗಿದ್ದು, ಸುಮಾರು 20 ಸಾವಿರ ಎಕರೆ ಅರಣ್ಯ ಪ್ರದೇಶ ಹೊತ್ತಿ ಉರಿದಿದೆ.

ಕಾಡಿನಲ್ಲಿ ಬೆಂಕಿ ಹರಡಲು ಕಿಡಿಗೇಡಿಗಳ ಕೃತ್ಯವೇ ಕಾರಣ ಎಂಬ ಆರೋಪಗಳೂ ಕೇಳಿ ಬರ್ತಿವೆ. ಕಿಡಿಗೇಡಿಗಳು ಆನೆಯ ಲದ್ದಿಗೆ ಬೆಂಕಿ ಹಚ್ಚಿದ್ದಾರೆಂಬ ಮಾತುಗಳೂ ಕೇಳಿ ಬರ್ತಿದೆ. ಆನೆ ಲದ್ದಿಗೆ ಬೆಂಕಿ ಇಟ್ಟರೆ ಅದು ದಟ್ಟವಾಗಿ ಉರಿಯುತ್ತೆ. ಇದೇ ಬೆಂಕಿಯಿಂದ ಇಡೀ ಅರಣ್ಯ ಹೊತ್ತಿ ಉರಿದಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಕಲ್ಕೆರೆ, ಎನ್​​-ಬೇಗೂರು, ಗುಂಡ್ರೆಯಲ್ಲಿ ಇದೇ ರೀತಿಯ ಕೃತ್ಯ ನಡೆದಿದ್ದು, 2016ರಲ್ಲಿ ಕಿಡಿಗೇಡಿಗಳು ಇದೇ ರೀತಿ ಬೆಂಕಿ ಹಚ್ಚಿದ್ದರು. ಹಸಿರಿನಿಂದ ಕಂಗೊಳಿಸ್ತಿದ್ದ ಗೋಪಾಲಸ್ವಾಮಿ ಬೆಟ್ಟ ಈಗ ಬೂದಿ ಬೂದಿಯಾಗಿರುವುದು ದುರಂತ.

LEAVE A REPLY

Please enter your comment!
Please enter your name here