ರೈತರಿಗೆ, ನೇಕಾರರಿಗೆ ಮೊದಲ ದಿನವೇ ಬಿಎಸ್​ವೈ ಗಿಫ್ಟ್..!

0
805

ಬೆಂಗಳೂರು : ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಬಿ.ಎಸ್ ಯಡಿಯೂರಪ್ಪ ರಾಜ್ಯದ ರೈತರಿಗೆ ಗಿಫ್ಟ್ ನೀಡಿದ್ದಾರೆ.
ಅಧಿಕಾರವಹಿಸಿಕೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾಬಿನೆಟ್​ ಮೀಟಿಂಗ್​ನಲ್ಲಿ ಪ್ರಮುಖವಾದ ಎರಡು ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರ್ಕಾರವೂ ಕೈ ಜೋಡಿಸುತ್ತಿದೆ. ಜೊತೆಗೆ ನೇಕಾರರ ಸಾಲಮನ್ನಾ ಮಾಡಲು ನಿರ್ಧರಿಸಿದ್ದೇವೆ ಅಂತ ತಿಳಿಸಿದ್ರು.
ಕೇಂದ್ರ ಸರ್ಕಾರ ಕಿಸಾನ್​ ಸಮ್ಮಾನ್ ಯೋಜನೆಯಡಿ 3 ಕಂತುಗಳಲ್ಲಿ 6 ಸಾವಿರ ರೂ ಅನ್ನು ರೈತರ ಖಾತೆಗೆ ಹಾಕುತ್ತಿದ್ದು, ಈ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ 2 ಕಂತುಗಳಲ್ಲಿ 4 ಸಾವಿರ ರೂ ನೀಡಲಾಗುತ್ತದೆ ಎಂದು ಘೋಷಿಸಿದರು. ಇದರೊಂದಿಗೆ ಕಿಸಾನ್ ಸಮ್ಮಾನ್ ಯೋಜನೆಯ ರಾಜ್ಯದ ಫಲಾನುಭವಿಗಳಿಗೆ 10 ಸಾವಿರ ರೂ ಸಿಗಲಿದೆ.
ಇನ್ನು ನೇಕಾರರ ಒಟ್ಟು 100 ಕೋಟಿ ರೂ ಸಾಲಮನ್ನಾ ಮಾಡಲಾಗುವುದು ಅಂತಲೂ ಬಿಎಸ್​ವೈ ತಿಳಿಸಿದ್ದಾರೆ. ಜುಲೈ 29ರ ಸೋಮವಾರ ಅಧಿವೇಶನದಲ್ಲಿ ಬಹುಮತ ಸಾಬೀತು ಪಡಿಸುತ್ತೇವೆ. ಜೊತೆಗೆ ಅದೇ ದಿನ ಹಣಕಾಸು ಮೂಸೂದೆ ಅಂಗೀಕರಿಸುತ್ತೇವೆ ಅಂತಲೂ ಹೇಳಿದ್ರು.

LEAVE A REPLY

Please enter your comment!
Please enter your name here