Homeರಾಜ್ಯಬೆಂಗಳೂರುಸ್ಯಾಂಡಲ್‌ವುಡ್‌ಗೆ ಬಿಗ್‌ ರಿಲೀಫ್‌ ಕೊಟ್ಟ ಸಿಎಂ ಬಿಎಸ್‌ವೈ ..!

ಸ್ಯಾಂಡಲ್‌ವುಡ್‌ಗೆ ಬಿಗ್‌ ರಿಲೀಫ್‌ ಕೊಟ್ಟ ಸಿಎಂ ಬಿಎಸ್‌ವೈ ..!

ಬೆಂಗಳೂರು: ಕೊರೋನಾದಿಂದಾಗಿ ಟಫ್‌ ರೂಲ್ಸ್‌ ತರೋಕೆ ಹೊರಟ ಬಿಬಿಎಂಪಿ ಸಿನಿರಂಗಕ್ಕೆ ಶಾಕ್‌ ಕೊಟ್ಟಿತ್ತು. ಚಿತ್ರಮಂದಿರಗಳಲ್ಲಿ ಸೀಟ್‌ ಫುಲ್ಗೆ ಬ್ರೇಕ್‌ ಹಾಕೋದಾಗಿ ಪ್ರಸ್ತಾವನೆ ಸಲ್ಲಿಸಿ ಟೆನ್ಷನ್‌ ತಂದಿಟ್ಟಿತ್ತು. ಈಗಾಗಲೇ ಬಿಗ್‌ ಬಜೆಟ್‌ ಸಿನಿಮಾ ಮಾಡಿದವರು ಆತಂಕದಲ್ಲಿದ್ದಾರೆ. ಆದರೆ, ಸಂಜೆ ವೇಳೆಗೆ ಸಿಎಂ ಬಿಎಸ್‌ವೈ ಸ್ಯಾಂಡಲ್‌ವುಡ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಬೆಳಗ್ಗೆಯಿಂದ ಟೆನ್ಷನ್‌ ಶುರುವಾಗಿತ್ತು. ಕಾರಣ ರಾಜ್ಯಕ್ಕೆ ದಾಳಿ ಇಡುತ್ತಿರುವ ಕೊರೋನಾ 2 ನೇ ಅಲೆ. ಹೊಸ ಮಾರ್ಗಸೂಚಿ ಹೇರಲು ಮುಂದಾದ ಬಿಬಿಎಂಪಿ ಪ್ರಸ್ತಾವನೆ ಶಾಕ್‌ ನೀಡಿತ್ತು. ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್, ಕೊರೋನಾ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತೆ. ಮದುವೆ ಸಮಾರಂಭ, ರಾಜಕೀಯ ಸಮಾವೇಶದ ಜೊತೆಗೆ ಸಿನಿಮಾ ಮಂದಿರಗಳಿಗೂ ನಿರ್ಬಂಧ ಹೇರಬೇಕಾಗುತ್ತೆ ಅಂತ ಪ್ರಸ್ತಾವನೆ ಸಲ್ಲಿಸಿದ್ದರು. ಇದು ಸ್ಯಾಂಡಲ್‌ವುಡ್‌ ನಟ, ನಿರ್ಮಾಪಕ, ಚಿತ್ರಮಂದಿರ ಮಾಲೀಕರು ಕೆಂಡಾಮಂಡಲರಾಗುವಂತೆ ಮಾಡಿತು.

ಚಿತ್ರರಂಗದ ತೀವ್ರ ವಿರೋಧದಿಂದ ಎಚ್ಚೆತ್ತ ಸಿಎಂ ಬಿಎಸ್‌ವೈ ಸಂಜೆ ವೇಳೆಗೆ ಗುಡ್‌ನ್ಯೂಸ್‌ ನೀಡಿದರು. ಚಿತ್ರ ಮಂದಿರಗಳಲ್ಲಿ ಶೇಕಡಾ 50 ರಷ್ಟು ಸೀಟ್‌ಗಳಿಗೆ ಮಾತ್ರ ಅವಕಾಶ ನೀಡಿ, ಶೇಕಡ 100 ರಷ್ಟು ಭರ್ತಿಗೆ ನಿರ್ಬಂಧ ಹೇರುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲವೆಂದು ಯಡಿಯೂರಪ್ಪ ಟ್ವೀಟ್‌ ಮಾಡಿದರು. ಸಿನಿಮಾ ಮಂದಿರಗಳಲ್ಲಿ ಶೇಕಡ 50 ರಷ್ಟು ಸೀಟ್ ಗಳ ಭರ್ತಿಗೆ ಮಾತ್ರ ಅವಕಾಶ ನೀಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದ ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ರನ್ನು ತರಾಟೆಗೆ ತೆಗೆದುಕೊಂಡರು.

ಇದರ ವಿರುದ್ಧ ನಟ ಪುನೀತ್ ರಾಜಕುಮಾರ್, ಅಲ್ಲದೆ ದುನಿಯಾ ವಿಜಯ್, ಸುದೀಪ್ ಸೇರಿದಂತೆ ಹಲವರು ಆಕ್ಷೇಪಿಸಿದ್ದರು. ಬೇರೆ ಎಲ್ಲ ಕಡೆ ಇಲ್ಲದ ನಿಯಮ ಚಿತ್ರಮಂದಿರಗಳಿಗೆ ಮಾತ್ರ ಬೇಕು ಎನ್ನುವ ಅಭಿಪ್ರಾಯ ಅಸಮಾಧಾನ ಕೇಳಿಬಂದಿತ್ತು.

ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಸಿನಿಮಾ ವೀಕ್ಷಿಸಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಿಎಂ ಮನವಿ ಮಾಡಿದ್ದಾರೆ. ಪ್ರೇಕ್ಷಕರು ಮತ್ತು ಥಿಯೇಟರ್ ಮಾಲೀಕರು ಎಲ್ಲಾ ಅವಶ್ಯಕ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಿ, ಕೊರೋನಾ ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಸಹಕರಿಸಿ ಎಂದು ಸಿಎಂ ಮನವಿ ಮಾಡಿದ್ದಾರೆ.

ಆತಂಕಗೊಂಡಿದ್ದ ಸ್ಯಾಂಡಲ್ವುಂಡ್ ಮಂದಿ ಸಂಜೆ ವೇಳೆಗೆ ನಿಟ್ಟುಸಿರು ಬಿಟ್ಟರು.  ಸ್ಟಾರ್ ನಟರ ಆಕ್ರೋಶಕ್ಕೆ ಬೆಂಡಾದ ಸರ್ಕಾರ ತನ್ನ ನಿಲುವನ್ನು ಬದಲಿಸಿಕೊಂಡಿದೆ. ಈ ಮೂಲಕ , ಕೊರೋನಾದಿಂದ ಈಗಷ್ಟೆ ಚೇತರಿಸಿಕೊಂಡಿದ್ದ ಚಿತ್ರರಂಗಕ್ಕೆ ಮತ್ತೊಂದು ಹೊಡೆತ ಬೀಳುವುದು ತಪ್ಪಿದಂತಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments