ಬೆಂಗಳೂರು : ರಾಜ್ಯದಲ್ಲಿ ರೂಪಾಂತರಿ ವೈರಸ್ ಆತಂಕ ಹಿನ್ನೆಲೆ ಏರ್ಪೋರ್ಟ್ಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ ವಿದೇಶಿ ಪ್ರಜೆಗಳನ್ನ ನೆಗೆಟಿವ್ ರಿಪೋರ್ಟ್ ಇದ್ರೆ ಮಾತ್ರ ಬಿಡ್ತೇವೆ ಒಂದು ವೇಳೆ ನೆಗೆಟಿವ್ ರಿಪೋರ್ಟ್ ಇಲ್ಲ ಅಂದ್ರೆ ಅಂತ ಪ್ರಯಾಣಿಕರನ್ನ ಕ್ವಾರಂಟೈನ್ ಮಾಡಿ ಟೆಸ್ಟ್ ಮಾಡಲಾಗುತ್ತೆ ಎಂದು ಬೆಂಗಳೂರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಅಷ್ಟೆ ಅಲ್ಲದೆ ಒಮಿಕ್ರಾನ್ ಇರೋ ದೇಶಗಳ ಪ್ರಜೆಗಳ ಪ್ರವೇಶಕ್ಕೆ ನಿರ್ಬಂಧಕ್ಕೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ, ಜೊತೆಗೆ ಹೆಲ್ತ್ ವರ್ಕರ್ಸ್ ಗೆ ಬೂಸ್ಟರ್ ಡೋಸ್ ಬಗ್ಗೆ ಸಹ ಕೇಳಿದ್ದು ಕೇಂದ್ರದ ನಿರ್ಧಾರಕ್ಕೆ ಕಾಯ್ತಿದ್ದೇವೆ. ಮೋದಿಯವರು ಈಗಾಗಲೇ ನಿನ್ನೆ ಸಭೆಯನ್ನ ಮಾಡಿದ್ದಾರೆ. ಭಾರತದಲ್ಲಿಯೂ ಈ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ,
ಇನ್ನು ಧಾರವಾಡ, ಬೆಂಗಳೂರು ಹಾಸ್ಟೆಲ್ಗಳಲ್ಲಿ ಎಚ್ಚರಕೆ ವಹಿಸಲಾಗಿದೆ ಹಾಸ್ಟೆಲ್ಗಳನ್ನ ಕಂಟೈನ್ಮೆಂಟ್ ಝೋನ್ ಆಗಿ ಮಾಡಿದ್ದೇವೆ ಹಾಗೂ ಮಾಲ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕೆಲಸ ಮಾಡುವವರಿಗೆ ಮತ್ತು ಸರ್ಕಾರಿ ಕಛೇರಿಗಲ್ಲಿ ಕೆಲಸ ಮಾಡುವವರಿಗೆ ಡಬಲ್ ಡೋಸ್ ಲಸಿಕೆ ಆಗಿರಲೇಬೇಕು ಎಂದು ಬೆಂಗಳೂರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ.
zithromax buy
zithromax 250mg
2fervour