ಇತ್ತೀಚೆಗೆ ಪರಭಾಷೆಯ ಚಿತ್ರರಂಗವೂ ಕನ್ನಡ ಸಿನಿಮಾದತ್ತ ತಿರುಗಿ ನೋಡುವಂತಹ ಒಳ್ಳೆಯ ಸಿನಿಮಾಗಳನ್ನು ನಮ್ಮ ಕನ್ನಡ ಚಿತ್ರರಂಗ ನೀಡುತ್ತಿದೆ. ಸಾಲು ಸಾಲು ಚಿತ್ರಗಳು ತೆರೆಮೇಲೆ ಬರುತ್ತಿದೆ. ಆದರೆ, ಚಿತ್ರಮಂದಿರಗಳಿಗೆ ಮಾತ್ರ ಬರುವ ಪ್ರೇಕ್ಷಕರ ಸಂಖ್ಯೆ ಮಾತ್ರ ಕಡಿಮೆಯಾಗಿದೆ. ಇದಕ್ಕೆಲ್ಲಾ ಕಾರಣವಾಗಿರುವುದು ಪೈರಸಿ ಅನ್ನೋ ಪೆಡಂಭೂತ.
ಹೌದು ಇತ್ತೀಚೆಗೆ ಯಾವುದೇ ಹೊಸ ಸಿನಿಮಾಗಳು ರಿಲೀಸ್ ಆದ ನೆಕ್ಸ್ಟ್ ಡೇಗೆ ಚಿತ್ರಗಳು ಆನ್ಲೈನ್ನಲ್ಲಿ ಸಿಕ್ಕಿ ಬಿಡುತ್ತವೆ. ಕೆಲವು ದಿನಗಳ ಹಿಂದೆಯಷ್ಟೇ ಪುನೀತ್ ರಾಜ್ಕುಮಾರ್ ಅವರ ಪಿಆರ್ಕೆ ಪ್ರೊಡಕ್ಷನ್ ಅಡಿ ತಯಾರಾಗಿರೋ ‘ಮಾಯಾಬಜಾರ್‘ಗೂ ಪೈರಸಿ ಕಾಟ ತಪ್ಪಿಲ್ಲ. ಚಿತ್ರ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ‘ಕನ್ನಡ ರಾಕರ್ಸ್‘ ಎಂಬ ವೆಬ್ಸೈಟ್ನಲ್ಲಿ ಸಿನಿಮಾ ಲೀಕ್ ಆಗಿದೆ.
ಸದ್ಯ ಸಿನಿಮಾವನ್ನು ಪೈರಸಿ ಮಾಡಿದವರ ವಿರುದ್ಧ ಹಾಗೂ ಅದನ್ನು ಶೇರ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸದಾಶಿವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.